ಮಡಿಕೇರಿ, ಫೆ 24 : ‘ಹಸಿರೇ ಉಸಿರು’ ಎಂಬ ಘೋಷಣೆಯೊಂದಿಗೆ ಕಡಗದಾಳು ಗ್ರಾಮದ ಅನೇಕ ಮಕ್ಕಳು ಗ್ರಾಮದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗ್ರೀನ್ ಸಿಟಿ ಫೋರಂ, ದೇಶ ಪ್ರೇಮ ಯುವಕ ಸಂಘ, ಕಾರ್‍ನರ್ ಫ್ರೆಂಡ್ಸ್, ಬೊಟ್ಲಪ್ಪ ಯುವಕ ಸಂಘ ಹಾಗೂ ಇಬ್ಬನಿ ರೆಸಾರ್ಟ್ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೂರು ತಿಂಗಳಿಗೊಮ್ಮೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಗ್ರೀನ್ ಸಿಟಿ ಫೋರಂನ ಕಾರ್ಯದರ್ಶಿ ತಿಮ್ಮಯ್ಯ ತಿಳಿಸಿದರು. ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ, ಕಸ ವಿಂಗಡೆನೆಯ ಬಗ್ಗೆ ಹಾಗೂ ಗ್ರಾಮ ವನ್ನು ಶುಚಿಯಾಗಿಡುವ ಬಗ್ಗೆ ಗ್ರೀನ್ ಸಿಟಿ ಫೋರಂನ ಸ್ಥಾಪಕ ಅಧ್ಯಕ್ಷ ಚಿಯ್ಯಂಡ ಸತ್ಯ ತಿಳಿ ಹೇಳಿದರು. ನಂತರ ಮಕ್ಕಳ್ಳು ಹಾಗೂ ವಿವಿಧ ಸಂಘಟನೆಯ ಯುವಕರೆಲ್ಲರೂ ಸೇರಿ ಕಡಗದಾಳು ಗ್ರಾಮವನ್ನು ಸ್ವಚ್ಛ ಮಾಡಿದರು.