ಗೋಣಿಕೊಪ್ಪ ವರದಿ, ಫೆ. 24 : ಕಡಿಮೆ ವಿದ್ಯುತ್ ಬಳಕೆಯಿಂದ ಆರ್ಮ್ ಕಾರ್ಟೆಕ್ಸ್ ಬಳಸಿ ಎಂಬೆಡೆಡ್ ಸಿಸ್ಟಮ್ ತಂತ್ರಜ್ಞಾನವನ್ನು ಬಳಸಲು ಅವಕಾಶವಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ದಿವಾಕರ ಹೇಳಿದರು. ಇತ್ತೀಚೆಗೆ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ 6 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರ್ಮ್ ಕಾರ್ಟೆಕ್ಸ್ ಬಳಸಿ ಎಂಬೆಡೆಡ್ ಸಿಸ್ಟಮ್ ಐಒಟಿ ಸೆನ್ಸಾರ್ ಅಪ್ಲಿಕೇಶನ್ ಬಗ್ಗೆಯ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಆಧುನಿಕ ತಾಂತ್ರಿಕ ಕೌಶಲ್ಯ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೆÇ್ರ. ಎಸ್ ಎ. ನರಸಿಂಹನ್ ಪಾಲ್ಗೊಂಡು ಎಂಬೆಡೆಡ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು. ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಪಿ ಬೆಳ್ಳಿಯಪ್ಪ, ಪ್ರಾಂಶುಪಾಲೆ ಡಾ. ಪಿ.ಸಿ ಕವಿತ ಇದ್ದರು.