ಮಡಿಕೇರಿ, ಫೆ. 23: ಕೇಂದ್ರ ಸಾಹಿತ್ಯ ಅಕಾಡೆಮಿ ಭಾರತೀಯ ಬುಡಕಟ್ಟು ಭಾಷೆಗಳ ಲೇಖಕರು ಭಾಗವಹಿಸುವ ‘ಬುಡಕಟ್ಟು ಭಾಷೆಗಳ ಸಮ್ಮೇಳನ’ ಎಂಬ ವಿಚಾರ ಸಂಕಿರಣವನ್ನು ನವದೆಹಲಿಯಲ್ಲಿ ಹಮ್ಮಿಕೊಂಡಿದೆ.
ತಾ. 24 ರಿಂದ 29 ರವರೆಗೆ ನಡೆಯುವ ಸಮ್ಮೇಳನದಲ್ಲಿ ತಾ. 25 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡವ ಬುಡಕಟ್ಟು ಭಾಷೆಗೆ ಸಂಬಂಧಿಸಿದಂತೆ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ವಿಚಾರ ಮಂಡಿಸಲಿದ್ದಾರೆ.
ನವದೆಹಲಿಯ ರವೀಂದ್ರ ಭವನದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ವಿಚಾರಗೋಷ್ಠಿ ತಾ. 24 ರಂದು (ಇಂದು) ಮಧ್ಯಾಹ್ನ 2.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಈ ಸಮ್ಮೇಳನದಲ್ಲಿ ಭಾರತದ ವಿವಿಧ ಬುಡಕಟ್ಟು ಭಾಷೆಯ ಲೇಖಕರು, ಚಿಂತಕರು ಭಾಗವಹಿಸಲಿದ್ದಾರೆ.