ಸೋಮವಾರಪೇಟೆ,ಫೆ.23: ಇತ್ತೀಚಿನ ದಿನ ಗಳಲ್ಲಿ ಹೆಚ್ಚಾಗಿ ನಡೆಯು ತ್ತಿರುವ ದೇಶ ದ್ರೋಹಿ ಪ್ರಕರ ಣಗಳನ್ನು ಮಟ್ಟಹಾಕುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತವೆ ಎಂದು ರಾಜ್ಯದ ಮಾಜೀ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ತಾಲೂಕಿನ ಸಂಗಯ್ಯನಪುರದಲ್ಲಿ ಆಯೋಜಿಸಿದ್ದ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗ ವಹಿಸಲು ಆಗಮಿಸಿದ್ದ ಸಚಿವರು ಮಾಧ್ಯಮ ದವರೊಂದಿಗೆ ಮಾತನಾಡಿದರು.

ಸಿಎಎ ಮತ್ತು ಎನ್‍ಆರ್‍ಸಿ ಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಕಿಸ್ತಾನದ ಪರವಾದ ಘೋಷಣೆ ಕೂಗಿದ ಪ್ರಕರಣದ ಬಗ್ಗೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ದೇಶದ್ರೋಹಿಗಳ ವಿರುದ್ಧ ನಿಶ್ಚಿತವಾಗಿಯೂ ಕ್ರಮ ಜರುಗಲಿದೆ. ಇದಕ್ಕೆ ಬೇಕಾದ ಸಿದ್ಧತೆ ಗಳನ್ನು ಸರ್ಕಾರ ಮಾಡಿಕೊಳ್ಳುತ್ತಿವೆ. ಸಿಎಎ ಮತ್ತು ಎನ್‍ಆರ್‍ಸಿಯನ್ನು ವಿರೋಧಿಸುವ ನೆಪದಲ್ಲಿ ಹಲವಷ್ಟು ದೇಶದ್ರೋಹಿ ಸಂಘ ಟನೆಗಳು ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುತ್ತಿವೆ. ಇದರಲ್ಲಿ ಅಂತಹ ಸಂಘಟನೆಗಳು ಸಫಲತೆ ಕಾಣುವದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಇದನ್ನು ಸಹಿಸದ ಕೆಲ ಮನಸ್ಥಿತಿಗಳು ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ದೇಶದ್ರೋಹ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು. ಇಂತಹ ದೇಶದ್ರೋಹಿ ಗಳನ್ನು ದೇಶದಲ್ಲಿ ಬೆಳೆಯಲು ಬಿಡುವ ದಿಲ್ಲ. ಇಲ್ಲಿಗೇ ಮಟ್ಟ ಹಾಕಲಾಗುವದು. ಮೊನ್ನೆ ನಡೆದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕಾರ್ಯಕ್ರಮ ಆಯೋಜಿಸಿ ದವರನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಲು ಕ್ರಮ ವಹಿಸಬೇಕಿದೆ ಎಂದು ಸದಾನಂದಗೌಡರು ತಿಳಿಸಿದರು. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಬಗ್ಗೆ ಮಾತನಾಡಿದ ಸಚಿವರು, ಭಾರತದ ಸ್ನೇಹ ಅಮೇರಿಕಾಕ್ಕೂ ಬೇಕಾಗಿದೆ ಎಂಬದು ಟ್ರಂಪ್‍ಗೆ ಮನವರಿಕೆ ಯಾಗಿದೆ. ಭಾರತ ಇದೀಗ ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಜಗತ್ತಿನ 5ನೇ ರಾಷ್ಟ್ರವಾಗಿದ್ದು, ಅಮೇರಿಕಾದ ಅಧ್ಯಕ್ಷರ ಭಾರತ ಭೇಟಿ ಸಂದರ್ಭ ಹಲವಷ್ಟು ವ್ಯಾಪಾರ ವಹಿವಾಟು, ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುವದು ಎಂದರು.