ಗೋಣಿಕೊಪ್ಪಲು, ಫೆ. 23: ಕಳೆದ ಎರಡು ವರ್ಷದ ಹಿಂದೆ ಜಲ ಪ್ರಳಯದಿಂದ ತತ್ತರಿಸಿ ಹೋಗಿದ್ದ ಸೋಮವಾರಪೇಟೆ ತಾಲೂಕಿನ ಕುಗ್ರಾಮವಾದ ಕುಂಬಾರಗಡಿಗೆ ಹಾಗೂ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳಿಗೆ ಇನ್ನು ಕೂಡ ಜಿಲ್ಲಾಡಳಿತದಿಂದ ಸರಿಯಾದ ರೀತಿಯಲ್ಲಿ ಪರಿಹಾರ ವಿತರಣೆಯಾಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಈ ಗ್ರಾಮಗಳಿಗೆ ತೆರಳಿ ಇಲ್ಲಿಯ ರೈತರ ಸಮಸ್ಯೆಗಳನ್ನು ಆಲಿಸುವುದರೊಂದಿಗೆ ರೈತ ಸಂವಾದ ಕಾರ್ಯಕ್ರಮ ನಡೆಯಿತು.

ರೈತರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮುಂದಿನ ತಿಂಗಳಿನಲ್ಲಿ ಈ ಎರಡು ಗ್ರಾಮದ ಗ್ರಾಮಸ್ಥರು ಹಾಗೂ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ನೊಂದ ರೈತನಿಗೆ ಸಿಗ ಬೇಕಾದ ನ್ಯಾಯಯುತ ಪರಿಹಾರ ವನ್ನು ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸು ವಂತೆಯೂ, ಒಂದುವೇಳೆ ಜಿಲ್ಲಾಡಳಿತ ನೊಂದ ಕುಟುಂಬಗಳಿಗೆ ಪರಿಹಾರ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹಿಂದೇಟು ಹಾಕಿದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ರೈತ ಸಂವಾದ ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಅಲೆಮಾಡ ಮಂಜುನಾಥ್, ಜಿಲ್ಲಾ ಖಜಾಂಚಿ ಇಟ್ಟಿರ ಸಬಿತ, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ಸಿದ್ದಾಪುರದ ಬೋಪಣ್ಣ, ಮುಂಡಚಾಡಿರ ಪ್ಯಾನ್ಸಿ ಕಿರಣ್, ಕಮಲ, ಕಡಮಕೊಲ್ಲಿಯ ಕರ್ತಮಾಡ ಸುಜಯ್, ಕಿರುಗೂರಿನ ಚಪ್ಪುಡೀರ ರೋಷನ್, ಕೊಕ್ಕೆಂಗಡ ಹರೀಶ್, ಪೆಮ್ಮಂಡ ಉಮೇಶ್, ಮಲ್ಲೆಂಗಡ ಸುಬ್ರಮಣಿ, ಕುಂಬಾರ ಗಡಿಗೆಯ ಗ್ರಾಮಸ್ಥರು ಹಾಜರಿದ್ದರು.