ಸೋಮವಾರಪೇಟೆ, ಫೆ. 23: ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಲು ಅನುಸರಿಸಬೇಕಾದ ವಿವಿಧ ಕೌಶಲ್ಯಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ನಡೆಯಿತು.

ಜೇಸೀ ಸಂಸ್ಥೆಯ ಅಂತರರಾಷ್ಟ್ರೀಯ ತರಬೇತುದಾರ ವಿಜಯ್‍ಕುಮಾರ್ ಕಾರ್ಯಾಗಾರದಲ್ಲಿ ಭಾಗವಹಿಸಿ, ಮಹಿಳೆಯರು ದೈನಂದಿನ ದಿನಚರಿಯಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಇರಲು ಅಳವಡಿಸಿಕೊಳ್ಳಬೇಕಾದ ಕೌಶಲ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಸದಸ್ಯರು ಮತ್ತು ಜೇಸೀ ಸಂಸ್ಥೆಯ ಸದಸ್ಯರುಗಳು ಭಾಗಿಯಾಗಿದ್ದರು. ಅಧ್ಯಕ್ಷತೆಯನ್ನು ಜೇಸೀ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್ ವಹಿಸಿದ್ದರು. ಕಾರ್ಯದರ್ಶಿ ಮಂಜುಳಾ ಸುಬ್ರಮಣಿ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.