ಕುಶಾಲನಗರ, ಫೆ. 22: ಕುಶಾಲನಗರದ ಕಲಾಸಾಗರ ಸಂಗೀತ ನೃತ್ಯ ನಾಟಕ ಅಕಾಡೆಮಿ ವತಿಯಿಂದ ತಾ. 24 ರಂದು ಸಂಗೀತ ರಸಮಂಜರಿ ಕಾರ್ಯಕ್ರಮ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ 7 ಗಂಟೆಗೆ ಪಟ್ಟಣದ ಕಾರು ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಂತರ್‍ರಾಷ್ಟ್ರೀಯ ಮಟ್ಟದ ಗಾಯಕ ಮೊಹಮ್ಮದ್ ನಫೀಸ್, ಮಹಾರಾಷ್ಟ್ರದ ರಶ್ಮಿ ಲೆಹೆರಿ, ಸ್ಥಳೀಯ ಕಲಾವಿದರಾದ ಲಿಯಾಖತ್ ಅಲಿ ಖಾನ್, ಶಕೀಲ್ ಖಾಸ್ಮಿ, ಬೆಂಗಳೂರಿನ ಸುಪ್ರಸಿದ್ದ ಮಿಮಿಕ್ರಿ ಕಲಾವಿದ ಸನಾ ಸಾಗರ್ ಆಗಮಿಸಲಿದ್ದಾರೆ. ಈ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹಫೀಜ್ ಸಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.