ಮಡಿಕೇರಿ, ಫೆ. 22: ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಸಿ.ಎನ್.ಸಿ ಆಶ್ರಯದಲ್ಲಿ ತಾ.21 ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸಿ.ಎನ್.ಸಿ ಕಾರ್ಯಕರ್ತರಿಂದ ಸತ್ಯಾಗ್ರಹ ನಡೆಯಿತು.
ಕೊಡವ ಭಾಷೆಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರರಿಗೆ ಕಳುಹಿಸಲಾಯಿತು.
ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆ ಗೊಳಿಸಬೇಕು, ಕೊಡವ ತಕ್ಕ್ ಮಾತೃಭಾಷೆ ಹೊಂದಿರುವ ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು. ಕೊಡವ ತಕ್ಕನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು ಎಂಬಂತೆ 18 ಬೇಡಿಕೆಗಳ ಪೂರೈಕೆಗೆ ಸತ್ಯಾಗ್ರಹ ನಡೆಯಿತು.
ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಡಾ. ಬೊವ್ವೇರಿಯಂಡ ಉತ್ತಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾಪ್ರಕಾಶ್, ನಂದಿನೆರವಂಡ ವಿಜು, ಮಂದಪಂಡ ಮನೋಜ್, ಚೆಂಬಂಡ ಜನತ್, ಕಾಂಡೇರ ಸುರೇಶ್, ಕಿರಿಯಮಾಡ ಶರಿನ್, ಅಪ್ಪೇಯಂಗಡ ಮಾಲೆ, ಮಾಚಿಮಾಡ ಲವ, ಅರೆಯಡ ಗರೀಶ್, ಅಳಮಂಡ ಜೈ, ಅಜ್ಜಿಕುಟ್ಟಿರ ಲೋಕೇಶ್ ,ಪುಟ್ಟಿಚಂಡ ಡಾನ್, ಮಣವಟ್ಟಿರ ಶಿವಣಿ, ಮಣವಟ್ಟಿರ ಜಗದೀಶ್, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಪುದಿಯೊಕ್ಕಟ ಕಾಶಿ, ಬೊಟ್ಟಂಗಡ ಗಿರೀಶ್, ಮಣವಟ್ಟಿರ ಚಿಣ್ಣಪ್ಪ, ನಂದಿನೆರವಂಡ ದಿನೇಶ್, ಕಾಟುಮಣಿಯಂಡ ಉಮೇಶ್, ಕೂಪದಿರ ಸಾಬು, ನಾಪಂಡ ಅರುಣ್ ,ಕೊಂಗೇಟಿರ ಲೋಕೇಶ್, ಪುಲ್ಲೇರ ಕಾಳಪ್ಪ, ಮೇದುರ ಕಂಟಿ ನಂಜಪ್ಪ, ಶಾಂತೆಯಂಡ ನಿರನ್ ಮುಂತಾದವರು ಭಾಗವಹಿಸಿದ್ದರು.