ಮಡಿಕೇರಿ, ಫೆ. 20: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ 2019-20ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ, ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿ ನಿಷೇಧದ ಬಗ್ಗೆ ಅರಿವು ಮೂಡಿಸುವ ಜನ ಜಾಗೃತಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗ ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿ ನಿಷೇಧ ಹಾಗೂ ಶಿಕ್ಷಣದ ಮಹತ್ವಗಳ ಕುರಿತು ಜನ ಜಾಗೃತಿ ಮೂಡಿಸಲು ಬೀದಿ ನಾಟಕ ಕಾರ್ಯಕ್ರಮವನ್ನು ವಿಶೇಷ ಘಟಕ ಯೋಜನೆ (ಎಸ್.ಸಿ.ಎಸ್.ಪಿ)ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ವಿದ್ಯಾ ಸಾಗರ ಕಲಾ ವೇದಿಕೆ ವತಿಯಿಂದ ಮತ್ತು ತಂಡದವರಿಂದ ಒಟ್ಟು 12 ರಿಂದ 15 ದಿನಗಳ ಕಾಲ ಬೀದಿ ನಾಟಕ ಮೂಲಕ ಅರಿವು ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಅವರು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ವಿದ್ಯಾ ಸಾಗರ ಕಲಾ ವೇದಿಕೆ ತಂಡದ ಈ. ರಾಜು, ಬಸವರಾಜು, ಗೌರಮ್ಮ, ಚಂದ್ರಪ್ಪ, ಮತ್ತಿತರರರು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ ಗೀತೆ ಹಾಡಿ ಗಮನ ಸೆಳೆದರು.
ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅರುಂಧತಿ, ಕಾರ್ಮಿಕ ವೇದಿಕೆ ವತಿಯಿಂದ ಮತ್ತು ತಂಡದವರಿಂದ ಒಟ್ಟು 12 ರಿಂದ 15 ದಿನಗಳ ಕಾಲ ಬೀದಿ ನಾಟಕ ಮೂಲಕ ಅರಿವು ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಅವರು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ವಿದ್ಯಾ ಸಾಗರ ಕಲಾ ವೇದಿಕೆ ತಂಡದ ಈ. ರಾಜು, ಬಸವರಾಜು, ಗೌರಮ್ಮ, ಚಂದ್ರಪ್ಪ, ಮತ್ತಿತರರರು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ ಗೀತೆ ಹಾಡಿ ಗಮನ ಸೆಳೆದರು.
ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅರುಂಧತಿ, ಕಾರ್ಮಿಕ ದೇವರಪುರ, ಮರೂರು ಕಾಲೋನಿ (ತಿತಿಮತಿ), ಕಿರಗೂರು ಕಾಲೋನಿ, ಕೊಟ್ಟೋಳಿ, ಪಾಲಿಬೆಟ್ಟ (ಹೊಸಕೋಟೆ), ಕೃಷ್ಣ ಕಾಲೋನಿ (ಪೊನ್ನಂಪೇಟೆ), ಬಲ್ಯಮಂಡೂರು, ಕೈಕೇರಿ, ವಡ್ಡರಮಾಡು, ಕೆದಮುಳ್ಳೂರು, ಆರ್ಜಿ, ಅರಸು ನಗರ.
ಸೋಮವಾರಪೇಟೆ ತಾಲೂಕಿನ ಕೂಡಮಂಗಳೂರು, ಕೂಡಿಗೆ, 2ನೇ ಬ್ಲಾಕ್ ಕುಶಾಲನಗರ, ಮಾದಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಗಣಗೂರು, ಆಲೂರು ಸಿದ್ದಾಪುರ, ಕಂಬಿಬಾಣೆ, ಗೌಡಳ್ಳಿ, 7ನೇ ಹೊಸಕೋಟೆ, ನೆಲ್ಲಿಹುದಿಕೇರಿ.
ಗಿರಿಜನ ಯೋಜನೆ (ಟಿ.ಎಸ್.ಪಿ) ಯಲ್ಲಿ ಮಡಿಕೇರಿ ತಾಲೂಕಿನ ಗಾಳಿಬೀಡು, ನರಿ ಯಂದಡ, ಯವಕಪಾಡಿ, ವೀರಾಜ ಪೇಟೆ ತಾಲೂಕಿನ ಶ್ರೀಮಂಗಲ, ಬ್ರಹ್ಮಗಿರಿ ಕಾಲೋನಿ (ಕಾನೂರು), ಬೆಳ್ಳೂರು ಮತ್ತು ಸೋಮವಾರಪೇಟೆ ತಾಲೂಕಿನ ಸೀತಾ ಕಾಲೋನಿ (ಕೂಡಿಗೆ), ಸಜ್ಜಳ್ಳಿ, ಬಸವನಹಳ್ಳಿಯಲ್ಲಿ ನಡೆಯಲಿದೆ.
ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪದ್ಧತಿಯು ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣದ ಹಾಗೂ ಸರ್ವಾಂಗೀಣ ಪ್ರಗತಿಯ ಅವಕಾಶಗಳನ್ನು ತಡೆಗಟ್ಟುತ್ತದೆ. ಆದ್ದರಿಂದ ಮಕ್ಕಳನ್ನು ದುಡಿಮೆಗೆ ನೂಕಬಾರದು.
ಶಿಕ್ಷಣ ವಂಚಿತ ಹಾಗೂ ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿಸಬೇಕಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದರು.
ಮಕ್ಕಳನ್ನು ದುಡಿಸಿಕ್ಕೊಳ್ಳುವುದು ಕಂಡುಬಂದಲ್ಲಿ ಕಾರ್ಮಿಕ ಇಲಾಖೆ ದೂ. 08272-225534, ಬಾಲಕಾರ್ಮಿಕ ಯೋಜನಾ ಸೊಸೈಟಿ ದೂ. 08272-220224, ಚೈಲ್ಡ್‍ಲೈನ್ (ಉಚಿತ ಕರೆ)1098ಗೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ ಮಾಹಿತಿ ನೀಡಿದ್ದಾರೆ.