ಚೆಟ್ಟಳ್ಳಿ, ಫೆ. 21: ಕಿಪ್ಸ್ಟಾಎಫ್‍ಸಿ ಮೂರ್ನಾಡು ವತಿಯಿಂದ ಮೂರ್ನಾಡುವಿನಲ್ಲಿ ನಡೆದ 18 ವರ್ಷ ವಯೋಮಿತಿಯ ಯಕಾಲ್ಚೆಂಡು ಪಂದ್ಯಾಟದಲ್ಲಿ ಕೊಂಡಂಗೇರಿ ಯೂತ್ ಕ್ಲಬ್ ತಂಡವು 1-0 ಗೋಲಿಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆತಿಥೇಯ ತಂಡ ಕಿಪ್ಸ್ಟಾ ಮೂರ್ನಾಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಕೆವೈಸಿ ಕೊಂಡಂಗೇರಿ ತಂಡ ಒಂಟಿಯಂಗಡಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಎರಡನೇ ಸೆಮಿಫೈನಲ್‍ನಲ್ಲಿ ಪಂದ್ಯವು ಆತಿಥೇಯ ಕಿಪ್ಸ್ಟಾ ತಂಡ ಬಲಮುರಿ ಎಫ್‍ಸಿವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.