ಗೋಣಿಕೊಪ್ಪ ವರದಿ, ಫೆ. 19: ಯೋಧ ಸ್ಕ್ವಾ.ಲೀ. ಅಜ್ಜಮಾಡ ಬಿ. ದೇವಯ್ಯ ಅವರ ಪ್ರತಿಮೆಯನ್ನು ಮಡಿಕೇರಿಯಲ್ಲಿ ಆದಪ್ಪು ಬೇಗ ಸ್ಥಾಪಿಸುವಂತೆ ಪೊನ್ನಂಪೇಟೆ ನಿವೃತ್ತ ಸೈನಿಕರ ಸಂಘ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದೆ.
ಪೊನ್ನಂಪೇಟೆ ನಿವೃತ್ತ ಸೈನಿಕರ ಸಂಘದ ಸಂಚಾಲಕ ಕಾಶಿ ತಮ್ಮಯ್ಯ ಮಾತನಾಡಿ, ಸ್ಕ್ವಾ.ಲೀ. ಅಜ್ಜಮಾಡ ಬಿ. ದೇವಯ್ಯ ಅವರಿಗೆ 1988 ರಲ್ಲಿ ಭಾರತ ಸರ್ಕಾರ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೂ ಜಿಲ್ಲಾಡಳಿತ ಪ್ರತಿಮೆ ಸ್ಥಾಪನೆಗೆ ಇನ್ನೂ ಮುಂದಾಗುತ್ತಿಲ್ಲ. ಸುಮಾರು ರೂ. 15 ಲಕ್ಷ ವೆಚ್ಚದಲ್ಲಿ ಅವರ ಪ್ರತಿಮೆ ತಯಾರಾಗಿದ್ದು, ಅದನ್ನು ಶೀಘ್ರದಲ್ಲಿ ಮಡಿಕೇರಿಯಲ್ಲಿ ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಐನಂಡ ಸುಬ್ರಮಣಿ, ಸದಸ್ಯರಾದ ಪೆಮ್ಮಂಡ ಶ್ಯಾಮ್, ಜಮ್ಮಡ ಜಾಲಿ ಜೋಯಪ್ಪ, ಮಾದಯ್ಯ ಉಪಸ್ಥಿತರಿದ್ದರು.