ಗುಡ್ಡೆಹೊಸೂರು, ಫೆ. 19: ಸಮೀಪದ ಹೇರೂರು ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಳಪೆಯಾಗಿದೆ ಎಂದು ಆರೋಪಿಸಿ ಅಲ್ಲಿನ ಗ್ರಾಮಸ್ಥರು ಪ್ರತಿಭಟಿಸಿದರು.

ಪ್ರತಿಭಟನೆ ಸಂದರ್ಭ ಗ್ರಾ.ಪಂ. ಸದಸ್ಯ ಬಿಜು ಮತ್ತು ಗ್ರಾಮಸ್ಥರಾದ ಶಶಿ, ಹೇಮರಾಜ್, ಕುರುಂಜಿ ಅನು, ಕೃಷ್ಣ, ಕೊಡಗು ಯುವ ಬ್ರೀಗೇಡ್‍ನ ಚಂದ್ರಶೇಖರ್, ಅರುಣ್ ಮತ್ತು ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.