ಮಡಿಕೇರಿ, ಫೆ. 19: ಆಧಾರ್ ನೋಂದಣಿ ಕೇಂದ್ರವನ್ನು ಕಾಪೆರ್Çರೇಶನ್ ಬ್ಯಾಂಕಿನ ನಗರದ ಶಾಖೆಯಲ್ಲಿ ತೆರೆದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ಪ್ರಬಂಧಕ ಆರ್.ಕೆ. ಬಾಲಚಂದ್ರ ತಿಳಿಸಿದ್ದಾರೆ.
ಆಧಾರ್ ನೋಂದಣಿಗೆ ಬರುವವರು ಕಡ್ಡಾಯವಾಗಿ ಮೂಲ ದಾಖಲಾತಿಯನ್ನು ತರಬೇಕು. ಗುರುತಿನ ಖಾತ್ರಿಗೆ/ ವಿಳಾಸದ ಖಾತ್ರಿಗೆ/ ವಯಸ್ಸಿಗೆ ಸಂಬಂಧಿಸಿದಂತೆ ಯಾವುದಾದರೊಂದು ಮಾಹಿತಿಯನ್ನು, ದಾಖಲೆಯನ್ನು ಪೂರೈಸಿ ಬ್ಯಾಂಕಿನಲ್ಲಿ ತೆರೆದ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ಹೊಸ ಆಧಾರ್ ಕಾರ್ಡ್ ಹಾಗೂ ಹಳೆಯ ಆಧಾರ್ ಕಾರ್ಡ್ಗೂ ತಿದ್ದುಪಡಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.
ಗುರುತಿನ ಖಾತ್ರಿಗೆ ದಾಖಲೆ: ಪಾಸ್ಪೆÇೀರ್ಟ್, ಪಾನ್ಕಾರ್ಡ್, ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ನರೇಗಾ ಕಾರ್ಡ್, ವಿಶ್ವವಿದ್ಯಾಲಯದ ಗುರುತಿನ ಕಾರ್ಡ್, ಆಯುಧ ಲೈಸೆನ್ಸ್ ಪೆÇೀಟೊ ಸಹಿತ ಬ್ಯಾಂಕ್ ಎಟಿಎಂ, ಪಾಸ್ಬುಕ್, ಪೋಟೊ ಕ್ರೆಡಿಟ್ ಕಾರ್ಡು, ಪೆನ್ಷನ್ ಕಾರ್ಡು, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಕಿಸಾನ ಪೆÇೀಟೊ ಪಾಸ್ಬುಕ್, ಇಲಾಖೆಯಿಂದ ವಿತರಿಸಲಾದ ಗುರುತಿನ ಚೀಟಿ,
ವಿಳಾಸದ ಖಾತ್ರಿಗೆ ದಾಖಲೆ: ಪಾಸ್ಪೋರ್ಟ್, ಬ್ಯಾಂಕ್ ಪಾಸ್ ಬುಕ್, ಪೆÇೀಸ್ಟ್ ಆಫಿಸ್ ಪಾಸ್ ಬುಕ್, ರೇಶನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಡ್ರೆವಿಂಗ್ ಲೈಸೆನ್ಸ್, ವಿದ್ಯುತ್ ಬಿಲ್, ಗ್ರೂಪ್ ಫೋಟೊ ಗುರುತಿನ ಚೀಟಿ, ಇನ್ಸೂರೆನ್ಸ್ ಪಾಲಿಸಿ, ನರೇಗಾ ಕಾರ್ಡ್, ಆಯುಧ ಲೆಸೆನ್ಸ, ಪೆನ್ಸನ್ ಕಾರ್ಡು, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಕಿಸಾನ್ ಫೋಟೊ ಪಾಸ್ಬುಕ್, ಎಂಎಲ್ಎ, ಎಂ.ಪಿ, ಫೋಟೊ ಗುರುತಿನ ಚೀಟಿ, ವಾಹನ ನೋಂದಣಿ ಪತ್ರ, ಅಡುಗೆ ಅನಿಲ ಸಂಪರ್ಕ ಪತ್ರ.
ವಯಸ್ಸಿನ ಖಾತ್ರಿಗೆ ದಾಖಲೆ: ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ. ಮಾಕ್ರ್ಸ್ ಕಾರ್ಡು, ವರ್ಗಾವಣೆ ಪ್ರಮಾಣ ಪತ್ರ, ಪಾಸ್ ಪುಸ್ತಕ, ಫೋಟೊ ಗುರುತಿನ ಚೀಟಿ, ಸ್ವಯಂ ಘೋಷಣೆಯ ಪ್ರಮಾಣ ಪತ್ರ, ಜನ್ಮ ದಿನಾಂಕ ನಮೂದು ಇರುವ ಶಾಲಾ ದಾಖಲಾತಿ ಪ್ರಮಾಣ ಪತ್ರ ನೀಡಬೇಕು.
ಹೊಸ ನೋಂದಣಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಆಧಾರ್ ಕಾರ್ಡಿನ ಯಾವುದೇ ಕಡ್ಡಾಯ ತಿದ್ದುಪಡಿ ಉಚಿತ. ಇತರ ತಿದ್ದುಪಡಿಗೆ ರೂ. 50 ಮತ್ತು ವರ್ಣ ಮುದ್ರಣಕ್ಕೆ ರೂ. 30 ವಯಸ್ಸಿನ ದಾಖಲೆ ಏನೂ ಇಲ್ಲದವರು ಸೇವಾ ಕೇಂದ್ರದಲ್ಲಿ ಲಭ್ಯವಿರುವ ಅರ್ಜಿ ಪಡೆದು ದೃಢೀಕರಣದೊಂದಿಗೆ ನೋಂದಣಿಗೆ ಸಲ್ಲಿಸಬಹುದು ಎಂದು ಆರ್.ಕೆ. ಬಾಲಚಂದ್ರ ತಿಳಿಸಿದ್ದಾರೆ.