ಮಡಿಕೇರಿ, ಫೆ. 19: ನಗರದ ಗಣಪತಿ ಬೀದಿ ನಿವಾಸಿ, ಪ್ರಕಾಶ್ ಕೆ. ಎನ್. ಹಾಗೂ ಸುಮಿತ್ರ ಕೆ.ಪಿ. ದಂಪತಿಯ ಪುತ್ರ ಡಾ. ಕುಮಾರ್ ಕೆ. ಪಿ. ರಾಜೀವ್ ಗಾಂಧಿ ಯೂನಿವರ್ಸಿಟಿಯಲ್ಲಿ ಡಿ.ಎಂ. ಕಾರ್ಡಿಯಾಲಜಿ ವಿಭಾಗದಲ್ಲಿ ರಾಜ್ಯದಲ್ಲಿ 2ನೇ ರ್ಯಾಂಕ್ ಪಡೆದು ಕೊಂಡಿದ್ದಾರೆ. ಈ ಹಿಂದೆ ಸಿಇಟಿ ಪರೀಕ್ಷೆಯಲ್ಲೂ ಕೂಡ ರಾಜ್ಯಕ್ಕೆ 2 ನೇ ಸ್ಥಾನವನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದರು.