ಮಡಿಕೇರಿ, ಫೆ. 16: ನ್ಯಾಯಾಂಗ ಇಲಾಖೆಯ ನೌಕರರ ಪತ್ತಿನ ಸಹಕಾರ ಸಂಘದಿಂದ ನೌಕರರ ಆರ್ಥಿಕ ಸಹಾಯಕ್ಕೆ ಅನುಕೂಲವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಹೇಳಿದರು.
ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ಮತ್ತು ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಮತ್ತು 4ನೇ ಸಮ್ಮೇಳನವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೌಕರರು ಪತ್ತಿನ ಸಹಕಾರ ಸಂಘದ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಸಂಘವನ್ನು ಉಳಿಸಿ ಬೆಳಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಮಾತನಾಡಿ, ನೌಕರರ ಪತ್ತಿನ ಸಹಕಾರ ಸಂಘ ಸಾಲ ನೀಡುವುದರಿಂದ ನೌಕರರಿಗೆ ಅನೇಕ ಅನುಕೂಲಗಳು ದೊರೆತಿವೆ. ನೌಕರರಿಗೆ ಹಣದ ಅವಶ್ಯಕತೆ ಇದ್ದಾಗ ಇಂತಹ ಪತ್ತಿನ ಸಹಕಾರ ಸಂಘಗಳು ಹೆಚ್ಚು ಉಪಯೋಗವಾಗುತ್ತವೆ ಎಂದು ಹೇಳಿದರು.
ವಕೀಲ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಮಾತನಾಡಿ, ಪತ್ತಿನ ನೌಕರರ ಸಂಘದಲ್ಲಿ ನೌಕರರ ಸಹಕಾರ ಇಲ್ಲದಿದ್ದರೆ ಯಶಸ್ಸು ಕಾಣಲು ಸಾದ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ಎಚ್.ವಿ ನಾಗೇಶ್ ಮಾತನಾಡಿ 1984ನೇ ಇಸವಿಯಿಂದ ನೌಕರರ ಪತ್ತಿನ ಸಹಕಾರ ಸಂಘ ನಡೆಯು ತಿದ್ದು, ಈ ಸಂಘವು ನೌಕರರಿಗೆ ಮುಂದಿನ ಜೀವನಕ್ಕೆ ಸಹಾಯವಾಗು ವಂತೆ ಸಾಲವನ್ನು ನೀಡಿ ಅವರ ಕಷ್ಟದ ಜೊತೆ ಕೈ ಜೋಡಿಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿಯ ಎಸ್.ಆರ್. ದಿಂಡಲಕೊಪ್ಪ, ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂನ ವಿಜಯಕುಮಾರ್, ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಜಯಪ್ರಕಾಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿ.ಕಾ.ಸೇ.ಪ್ರಾ.ಸದಸ್ಯ ಕಾರ್ಯದರ್ಶಿ ನೂರುನ್ನಿಸ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಿ.ಕೆ.ಮನು, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿಯ ಸಂದೀಪ್ ರೆಡ್ಡಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಕೋನಪ್ಪ, ಆಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಸ್ಮಿತಾ ನಾಗಲಾಪುರ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಪ್ರತಿಭಾ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿಯ ಗಿರಿಗೌಡ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಮಹಾಲಕ್ಷ್ಮಿ, ಪೊನ್ನಂಪೇಟೆ ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿ ಕುಶ ಕುಮಾರ್, ಕುಶಾಲನಗರ ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿ ನಾಗರತ್ನ, ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಂಘದ ಅಧ್ಯಕ್ಷ ಬಿ.ಎಸ್. ಜಯಪ್ಪ, ಗೌರವಾಧ್ಯಕ್ಷರು ಮತ್ತು ಪ್ರಭಾರ ಆಡಳಿತಾಧಿಕಾರಿಗಳಾದ ಎಸ್.ಟಿ ಶಮ್ಮಿ , ಸೋಮವಾರ ಪೇಟೆ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಶೆಟ್ಟಿ, ವೀರಾಜಪೇಟೆ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು ಮತ್ತು ಇತರರು ಪಾಲ್ಗೊಂಡಿದ್ದರು. ಎಚ್.ಟಿ ಲಕ್ಷ್ಮಣ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯನಾಡಿದರು, ರೋಹಿಣಿ ಪ್ರಾರ್ಥಿಸಿದರು, ಮೀನಾ ಮತ್ತು ಮಂಜುಳಾ ಆನಂದ ನಿರೂಪಿಸಿದರು. ದೇವಾನಂದ ವಂದನಾರ್ಪಣೆ ಮಾಡಿದರು.