ಶನಿವಾರಸಂತೆ, ಫೆ. 16: ಪಟ್ಟಣದ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ತಾ. 19 ರಿಂದ 21 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 22ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ತಾ. 19 ರಂದು ಶ್ರೀ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆ 9.20 ಕ್ಕೆ ನಡೆಯುವ ಪಾದಯಾತ್ರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ಶರತ್ಶೇಖರ್ ವಹಿಸಲಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ. ಪ್ರಕಾಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಡಿ. ಅರವಿಂದ್, ಎಸ್.ಆರ್. ಮಧು, ಎಂ.ಎನ್. ಧರ್ಮಪ್ಪ, ಪಿ. ನಾಗೇಶ್, ಮುನಿರಾಜ್ ಪಾಲ್ಗೊಳ್ಳಲಿದ್ದಾರೆ.
ನಂತರ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಶನಿವಾರಸಂತೆಯಿಂದ ಸುಬ್ರಹ್ಮಣ್ಯದ ಮೂಲಕ ಧರ್ಮಸ್ಥಳಕ್ಕೆ ತೆರಳುವ ಸಂದರ್ಭ ರಸ್ತೆ ಪಕ್ಕ ಬಿದ್ದಿರುವ ಪ್ಲಾಸ್ಲಿಕ್ ಬಾಟಲ್ಗಳನ್ನು, ತ್ಯಾಜ್ಯವನ್ನು ಹೆಕ್ಕಿ ಶ್ರಮದಾನ ಮಾಡುತ್ತಾ ಸಾಗುವುದಾಗಿ ಸಮಿತಿ ವ್ಯವಸ್ಥಾಪಕ ಪಿ.ಡಿ. ಮೋಹನ್ ಕುಮಾರ್, ರಾಜು, ಜಯಪ್ಪಣ್ಣ ತಿಳಿಸಿದ್ದಾರೆ.