ಮಡಿಕೇರಿ, ಫೆ. 16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಪೋಷಣ್ ಅಭಿಯಾನ, ಬಾಲ್ಯ ವಿವಾಹ, ಭೇಟಿ ಬಜಾವ್ ಭೇಟಿ ಪಡಾವ್, ಮಾತೃವಂದನ, ಮಾತೃಪೂರ್ಣ, ಮಾತೃಶ್ರೀ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಬೀದಿ ನಾಟಕವನ್ನು ಏರ್ಪಡಿಸಲಾಗಿತ್ತು.

ಸಮನ್ವಯ ಟ್ರಸ್ಟ್ ಸಂಸ್ಥೆ, ಶಿವಮೊಗ್ಗ ಇವರ ಮೂಲಕ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರಾಥಮಿಕ ಶಾಲೆ ಮೇಕೇರಿ, ಸರ್ಕಾರಿ ಬಸ್ ನಿಲ್ದಾಣ ಮಡಿಕೇರಿ, ಮಹಿಳಾ ಕಾಲೇಜು ಮಡಿಕೇರಿ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರ ಮಡಿಕೇರಿ ಇಲ್ಲಿ ಪ್ರದರ್ಶಿಸಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.