ಮಡಿಕೇರಿ, ಫೆ. 16: ಅರೆಭಾಷೆಯ ಸಾಂಸ್ಕøತಿಕ ಪರಂಪರೆಯನ್ನು ಹೊರತರಲು ಕಿಡ್ಡಾಸ ಹಬ್ಬ ಆಚರಣೆ ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಶ್ರೀ ಭಗವಾನ್ ಸಂಘ ಊರುಬೈಲು, ಸ್ವಾಮಿ ವಿವೇಕಾನಂದ ಯುವಕ ಮಂಡಲ ಸಹಯೋಗದಲ್ಲಿ ಚೆಂಬು ಗ್ರಾಮದ ಕೂಡಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅರೆಭಾಷೆ ಸಿರಿ ಸಂಸ್ಕøತಿ ಮತ್ತು ಕಿಡ್ಡಾಸ ಗೌಜಿ ಸಾಂಸ್ಕøತಿಕ ಜಂಬರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳಾಗಬೇಕು. ಅರೆಭಾಷೆ ಮಾತನಾಡುವ ಜನಾಂಗದ ಪ್ರತಿಭೆಯನ್ನು ಹೊರತರಲು ಈ ಇಂತಹ ಕಾರ್ಯಕ್ರಮ ಅವಶ್ಯಕ ಎಂದು ಹೇಳಿದರು.ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಅರೆಭಾಷೆ ಸಂಸ್ಕøತಿ ಪರಂಪರೆಯನ್ನು ಪರಿಚಯಿಸಲು ಇಂತಹ ಕಾರ್ಯ ಕ್ರಮಗಳು ಸಹಕಾರಿಯಾಗಿವೆ ಎಂದು ಹೇಳಿದರು. ಮುಂದಿನ ಪೀಳಿಗೆಗೂ ಈ ಸಂಸ್ಕøತಿಯನ್ನು ಮುಂದು ವರೆಸಿಕೊಂಡು ಹೋಗುವಂತಾಗಬೇಕು ಎಂದರು.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ ಮಾತನಾಡಿ, ಬದುಕು ಆಧುನಿಕತೆಗೆ ಹೊಂದಿಕೊಳ್ಳುತ್ತಿದ್ದಂತೆ ಅರೆಭಾಷೆ ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಅರೆಭಾಷೆಯ ಬಗ್ಗೆ ಹಲವರಲ್ಲಿರುವ ಕೀಳರಿಮೆ ಇದಕ್ಕೆ ಕಾರಣ. ಅರೆಭಾಷೆಗೆ ಸುದೀರ್ಘ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಂಪರೆಯಿದೆ. ಇವೆಲ್ಲವನ್ನು ಅರಿತು, ಅರೆಭಾಷೆಯ
(ಮೊದಲ ಪುಟದಿಂದ) ಪರಿಹಾರ ಚೆಕ್ ವಿತರಿಸಿದರು. ಹುಲಿ ಸೆರೆಗೆ ಬೋನ್ ಅಳವಡಿಸಿದರು.
ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಡಿಎಫ್‍ಒ ಶಿವಶಂಕರ್, ಎಸಿಎಫ್ ಶ್ರೀಪತಿ, ಶ್ರೀಮಂಗಲ ಠಾಣಾಧಿಕಾರಿ ದಿನೇಶ್ ಕುಮಾರ್ ಹಾಗೂ ಸಿಬ್ಬಂದಿ ಮೊಕ್ಕಾಂ ಹೂಡಿದ್ದರು. ಹಿರಿಯ ಅರಣ್ಯ ಅಧಿಕಾರಿಗಳ ದೂರವಾಣಿ ಸಂದೇಶ ಬಂದ ನಂತರ ಪ್ರತಿಭಟನೆ ಹಿಂಪಡೆಯುವ ಮೂಲಕ ಪರಿಹಾರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಮಾಯಮುಡಿ ಯ ಪುಚ್ಚಿಮಾಡ ರಾಯ್ ಮಾದಪ್ಪ, ಹುದಿಕೇರಿಯ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಬಲ್ಯಮಿದೇರಿರ ಪ್ರಕಾಶ್, ಮಂಡಂಗಡ ಯೊಗೇಶ್, ಬೊಜ್ಜಂಗಡ ಪೂಣಚ್ಚ, ಇಟ್ಟಿರ ಕುಶಾಲಪ್ಪ, ಪಂದಿಮಾಡ ಗಿರೀಶ್, ಆಲೆಮಾಡ ರಾಜ, ಮುಲ್ಲೆಂಗಡ ಶರಣು, ಇಟ್ಟಿರ ಪೊನ್ನಣ್ಣ, ಗಿರೀಶ್ ನೂರೆರ ಮನೋಜ್, ಮುಂತಾದವರು ಹಾಜರಿದ್ದರು.
ಕಾಲೇಜಿನ ಪ್ರಾಂಶುಪಾಲರು ಮತ್ತು ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ಡಾ. ಎನ್.ಎ ಜ್ಞಾನೇಶ್ ಮಾತನಾಡಿ, ಅರೆಭಾಷೆ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ ಅನಂತ, ನಿವೃತ್ತ ಪ್ರಾಂಶುಪಾಲರು ಮತ್ತು ಲೇಖಕರಾದ ಕುಯಿಂತೋಡು ದಾಮೋದರ, ಚೆಂಬುವಿನ ಸ್ವಾಮಿ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಪೂಜಾರಿ ಗದ್ದೆ, ಕೂಡಡ್ಕ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೀವನ್ ಪೆರಿಗೇರಿ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡಮಿಯ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ ಸೇರಿದಂತೆ ಇತರರು ಇದ್ದರು.
ಚೆಂಬು ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಯೋಜಕರಾದ ಲೋಕೇಶ್ ಊರುಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡಮಿ ಸದಸ್ಯೆ ಸ್ಮಿತಾ ಅಮೃತರಾಜ್ ಸ್ವಾಗತಿಸಿದರು, ರಮೇಶ ನಂಬಿಯಾರ್ ನಿರೂಪಿಸಿದರು. ಎಂ.ಬಿ. ರವಿಕುಮಾರ್ ವಂದಿಸಿದರು.
ಫಲ ಕೊಡುವ ಭೂಮಿಗೆ ಪೂಜೆ
ಕಿಡ್ಡಾಸ ಹಬ್ಬಕ್ಕೆ ತನ್ನದೇ ಆದ ಸಾಂಸ್ಕøತಿಕ ಪರಂಪರೆ ಇದೆ ಎಂದು ಅಧ್ಯಾಪಕರು ಮತ್ತು ಜಾನಪದ ವಿದ್ವಾಂಸರಾದ ಸುಂದರ್ ಕೇನಾಜೆ ತಿಳಿಸಿದರು. ಅರೆಭಾಷೆ ಸಿರಿ ಸಂಸ್ಕøತಿ ಮತ್ತೆ ಕಿಡ್ಡಾಸ ಗೌಜಿ ಸಾಂಸ್ಕøತಿಕ ಜಂಬರ ಕಾರ್ಯಕ್ರಮದಲ್ಲಿ, ಜನಪದರ ಬದ್‍ಕ್ಲಿ ಕಿಡ್ಡಾಸ ಹಬ್ಬ ವಿಚಾರವಾಗಿ ಅವರು ಮಾತನಾಡಿದರು.
ವಷರ್Àವಿಡಿ ಫಲ ಕೊಡುವ ಭೂಮಿಗೆ ಪೂಜೆ ಸಲ್ಲಿಸುವುದೇ ಈ ಹಬ್ಬದ ಮುಖ್ಯ ಉದ್ದೇಶ. ಮನೆಯ ಹಿರಿಯ ಹೆಣ್ಣುಮಗಳು ಭೂಮಿಗೆ ತೆಂಗಿನ ಎಣ್ಣೆಯನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಕೊಡಗು ಮಾತ್ರವಲ್ಲದೆ ಕರಾವಳಿ ಭಾಗದಲ್ಲೂ ಈ ರೀತಿಯ ಆಚರಣೆಗಳಿವೆ. 3 ದಿನಗಳು ನಡೆಯುವ ಈ ಹಬ್ಬ ವೈಷÀ್ಟ್ಯತೆಗಳಿಂದ ಕೂಡಿರುತ್ತದೆ ಎಂದರು. ಬಳಿಕ ಕಿಡ್ಡಾಸ ಹಬ್ಬದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸ್ವಾಮಿ ವಿವೇಕಾನಂದ ಯುವಕ ಸಂಘದವರು ಪ್ರಸ್ತುತ ಪಡಿಸಿದರು.
ಅರೆಭಾಷಾ ಚಿಂತಕರು ಮತ್ತು ಕೃಷಿಕರಾದ ಹೊಸೂರು ಚಂದ್ರಶೇಖರ್ ಅವರು ಅರೆಭಾಷೆ ಸಂಸ್ಕøತಿಲಿ ಮನೆ ಒಕ್ಕಲು ಜಂಬರ ಕುರಿತಾಗಿ ಉಪನ್ಯಾಸ ನೀಡಿದರು. ಲೀಲಾವತಿ ಕಲಾಯಿ ಮತ್ತು ಬಳಗದವರ ಮುಂದಾಳತ್ವದಲ್ಲಿ ಪಂಚಾನನ ಭಜನಾ ತಂಡದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅರೆಭಾಷೆ ಚಿಂತಕರು ಮತ್ತು ಅರಂತೋಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶೀಲಾವತಿ ಕೃಷÀ್ಣಪ್ಪ ಬಿಳಿಯಾರ್ ಅವರು, ಅರೆಭಾಷಾ ಸಂಸ್ಕøತಿಲಿ ಕೂಸ್‍ನ ತೊಟ್ಟಿಲ್‍ಗೆ ಹಾಕುವ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು. ರಮಾನಂದ ಬಾಳೆಕಜೆ ಮತ್ತು ಬಳಗದ ಮುಂದಾಳತ್ವದಲ್ಲಿ ತೊಡಿಕಾನ ಗೌಡ ಯುವ ಸೇವಾ ಸಂಘದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಅರೆಭಾಷಾ ಸಂಸ್ಕøತಿಲಿ ಮದುವೆ ಜಂಬರ ವಿಚಾರದ ಕುರಿತು ಸಂಸ್ಕøತಿ ಮತ್ತು ಭಾಷಾ ಚಿಂತಕರು, ಲೇಖಕರು ಮತ್ತು ಅಧ್ಯಾಪಕರೂ ಆದ ದೊಡ್ಡಣ್ಣ ಬರೆಮೇಲು ಉಪನ್ಯಾಸ ನೀಡಿದರು.
ಗಣಪಯ್ಯ ಗುಂಡಿ ಮಜಲು ಮತ್ತು ತಂಡದವರ ನೇತೃತ್ವದಲ್ಲಿ ಚೆಂಬುವಿನ ಗೌಡ ಯುವ ಸೇವಾ ಸಂಘದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿ ದರು. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.