ವರದಿ-ಚಂದ್ರಮೋಹನ್ ಕುಶಾಲನಗರ, ಫೆ. 16: ದೂರಶಿಕ್ಷಣ ಹೆಸರಿನಲ್ಲಿ ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆ ಭಾರೀ ಅವ್ಯವಹಾರ ಆತಂಕಕಾರಿ ಬೆಳವಣಿಗೆ ಬಗ್ಗೆ ವರದಿಗಳು ಹೊರಬಿದ್ದಿವೆ. 18 ವರ್ಷ ಆಗಿದ್ದರೆ ಸಾಕು, ಯಾರೂ ಬೇಕಾದರೂ ಡಿಗ್ರಿ ಅಥವಾ ಸ್ನಾತಕೋತ್ತರ ಪದವಿ ಗಳಿಸಬಹುದು. ತಕ್ಷಣ ಸಂಪರ್ಕಿಸಿ ಅನ್ನುವ ಫಲಕಗಳು ರಾರಾಜಿಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ದಂಧೆಯಾಗಿ ಪರಿವರ್ತನೆಗೊಂಡಿದ್ದು ಸರಕಾರದ ದೂರದೃಷ್ಟಿಯ ದೂರಶಿಕ್ಷಣ ಶೈಕ್ಷಣಿಕ ಯೋಜನೆಯೊಂದರ ದುರುಪಯೋಗವಾಗುತ್ತಿರುವುದು ದುರದೃಷ್ಟಕರ ಎನ್ನಬಹುದು. ಎಲ್ಲೆಡೆ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮರ, ಗಿಡಗಳಲ್ಲಿ ಡಿಗ್ರಿಗೆ ನೇರ ಪ್ರವೇಶ, ನೇರ ಪ್ರವೇಶಾತಿಗೆ ಸಂಪರ್ಕಿಸಿ ಎನ್ನುವ ಫಲಕಗಳು ರಾಜಾರೋಷವಾಗಿ ನೇತಾಡುತ್ತಿರುವುದು ಪ್ರಸಕ್ತ ಶಿಕ್ಷಣ ಪದ್ಧತಿಯ ದುಸ್ಥಿತಿಗೆ ಕೈಗನ್ನಡಿ ಎಂದರೆ ತಪ್ಪಾಗಲಾರದು. ಕುಶಾಲನಗರ ಪಟ್ಟಣದಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಡಿಗೆ ರೂಂ ಒಂದರಲ್ಲಿ ಕಛೇರಿ ತೆರೆದು ಶಿವಮೊಗ್ಗ ಕೇಂದ್ರಸ್ಥಾನ ಹೊಂದಿರುವ ಕುವೆಂಪು ವಿಶ್ವವಿದ್ಯಾಲಯ ಹೆಸರಿನಲ್ಲಿ ಅಧ್ಯಯನ ಕೇಂದ್ರವೊಂದು ದೂರಶಿಕ್ಷಣದ ಹೆಸರಿನಲ್ಲಿ ಬಿಎ, ಬಿಕಾಂ, ಬಿಎಸ್‍ಸಿ, ಬಿಬಿಎಂ, ಎಂ.ಎ., ಎಂ.ಕಾಂ, ಎಂಎಸ್ಸಿ, ಎಂಬಿಎ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಕಲ್ಪಿಸುತ್ತಿದೆ. ಕುವೆಂಪು ವಿವಿಯ ಮಾನ್ಯತೆ ಪಡೆದಿರುವ ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನಿಯಮಾನುಸಾರ ನಡೆಸಬೇಕಾದ ತರಗತಿಗಳನ್ನು ನಡೆಸುತ್ತಿಲ್ಲ ಎನ್ನುವ ದೂರುಗಳು ಕೂಡ ಕೇಳಿಬಂದಿವೆ. ವಿಜ್ಞಾನ ತರಗತಿಗಳಿಗೆ ಅವಶ್ಯವಿರುವ ಪ್ರಯೋಗಾಲಯಗಳನ್ನು ಕೂಡ ಸರಿಯಾಗಿ ಹೊಂದಿರುವುದಿಲ್ಲ. ಅಂದಾಜು 200 ರಿಂದ 300 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿಕೊಂಡು ಲಕ್ಷಾಂತರ ಮೊತ್ತದ ಹಣ ಸಂಗ್ರಹಿಸಿ ಇವರಿಗೆ ಪರೀಕ್ಷಾ ಕೇಂದ್ರವೊಂದನ್ನು ಗುರುತಿಸಿ ಪರೀಕ್ಷೆ ನಡೆಸುತ್ತಾರೆ. ಆದರೆ ಈ ಕೇಂದ್ರಗಳಲ್ಲಿ ಯಾವುದೇ ಅರ್ಹತೆ ಹೊಂದಿರುವ ಉಪನ್ಯಾಸಕರು ಇರುವುದಿಲ್ಲ. ಹೆಸರಿಗೆ ತಕ್ಕಂತೆ ದೂರ ದೂರದ ಶಿಕ್ಷಣ ಇದಾಗಿದೆ ಎನ್ನಬಹುದು. ಇಷ್ಟಾದರೆ ಪರವಾಗಿಲ್ಲ. ಇವರಿಗೆ ನಡೆಯುವ ವರ್ಷದ ವಾರ್ಷಿಕ ಪರೀಕ್ಷೆ ಯಾವ ರೀತಿ ಇದೆ ಎಂದು ತಿಳಿದರೆ ಎಲ್ಲರೂ ಎಚ್ಚರಿಪಡುವಂತಹದ್ದು.
ಪ್ರತಿಯೊಬ್ಬರೂ ಪುಸ್ತಕ ನೋಡಿ ಪರೀಕ್ಷೆಗೆ ಉತ್ತರ ಬರೆಯುವಂತಹ ಅಘೋಷಿತ ನಿಯಮ ಇಲ್ಲಿ ಕಲ್ಪಿಸಲಾಗುತ್ತದೆ ಎಂಬುದು ‘ಶಕ್ತಿ’ಗೆ ತಿಳಿದುಬಂದ ಆಶ್ಚರ್ಯಕರವಾದ ಸಂಗತಿಯಾದರೂ ಸತ್ಯ.
ಕಳೆದ 4 ವರ್ಷಗಳಿಂದ ಕುಶಾಲನಗರದ ತಾವರೆಕೆರೆ ಬಳಿಯಿರುವ ಮಹಾತ್ಮಾ ಮೆಮೋರಿಯಲ್ ಡಿಗ್ರಿ ಕಾಲೇಜಿನಲ್ಲಿ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿತ್ತು. ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಮನವಿ ಮಾಡಿದ ಹಿನೆÀ್ನಲೆಯಲ್ಲಿ ತಮ್ಮ ಕಾಲೇಜನ್ನು ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ನೀಡಲಾಗುತ್ತಿತ್ತು. ಸ್ಥಳೀಯ ದೂರಶಿಕ್ಷಣ ಕೇಂದ್ರದ ಪ್ರಮುಖರೊಬ್ಬರು ಇದರ ಆಯೋಜಕರಾಗಿದ್ದು ಪರೀಕ್ಷೆ ಸಂದರ್ಭ ಸಾಮೂಹಿಕವಾಗಿ ನಕಲು ಮಾಡಲು ಅವಕಾಶ ಕಲ್ಪಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಕೇಂದ್ರದ ಕಾಲೇಜಿನ ಮುಖ್ಯಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ತನ್ನ ಕಾಲೇಜಿನ ಘನತೆಗೆ ಕುಂದು ಉಂಟಾಗುತ್ತದೆ ಮತ್ತು ನಿಯಮ ಉಲ್ಲಂಘಿಸಿ ಈ ರೀತಿ ಮಾಡಲು ಅವಕಾಶ ಕಲ್ಪಿಸುವುದಿಲ್ಲ ಎಂದ ಕಾರಣಕ್ಕೆ ದೂರ ಶಿಕ್ಷಣ ಕೇಂದ್ರದ ಆಯೋಜಕರು ಪರೀಕ್ಷಾ ಕೇಂದ್ರವನ್ನೇ ಏಕಾಏಕಿ ಬದಲಾಯಿಸಿದ್ದಾರೆ. ಪರೀಕ್ಷಾ ಕೇಂದ್ರವೊಂದನ್ನು ನಿಯುಕ್ತಿಗೊಳಿಸಬೇಕಾದರೆ ಕಾಲೇಜು ಕೇಂದ್ರದ ಸಂಪೂರ್ಣ ದಾಖಲೆ ಗಳನ್ನು ಸಂಬಂಧಿಸಿದ ವಿಶ್ವ ವಿದ್ಯಾಲ ಯಕ್ಕೆ ಒದಗಿಸಿಕೊಡ ಬೇಕಾಗುತ್ತದೆ. ಹಾಗೂ ಈ ಬಗ್ಗೆ ಹಿಂದಿನ ಪರೀಕ್ಷಾ ಕೇಂದ್ರಗಳಿಗೆ (ಮೊದಲ ಪುಟದಿಂದ) ಮಾಹಿತಿ ಕೂಡ ಕಳುಹಿಸಿಕೊಡುವುದು ವಾಡಿಕೆ. ಈ ಬಗ್ಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲರು ಸಂಬಂಧಿಸಿದ ಆಯೋಜಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ‘ನಾಟ್ ರೀಚೆಬಲ್’ ಆಗಿರುವುದು ಸಂಶಯಕ್ಕೆ ಎಡೆ ಮಾಡಿದೆ. ‘ಶಕ್ತಿ’ ಕಳೆದೆರಡು ದಿನಗಳಿಂದ ಸ್ಥಳೀಯ ಸಂಸ್ಥೆಯ ಆಯೋಜಕರಾದ ಡಾ.ನಾಗೇಂದ್ರ ಮತ್ತು ಅವರ ಕಛೇರಿ ಸಿಬ್ಬಂದಿಗಳನ್ನು ಸಂಪರ್ಕಿಸಿದರೂ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಲಭಿಸಿಲ್ಲದಿ ರುವುದು ಈ ಎಲ್ಲಾ ಸಂಶಯಗಳಿಗೆ ಪುಷ್ಟಿ ನೀಡಿದಂತಾಗಿದೆ. ಈ ಪ್ರಕರಣಗಳಲ್ಲಿ ಸ್ಥಳೀಯ ಕೆಲವರ ಕೈವಾಡ ಇರುವುದಾಗಿ ಆರೋಪಗಳು ಕೇಳಿಬಂದಿವೆ.
ಆನ್‍ಲೈನ್‍ನಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದರೆ ಕುಶಾಲನಗರ ಎಂಜಿಎಂ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಿರುವುದು ಇದುವರೆಗೆ ಕಂಡುಬಂದಿಲ್ಲ. ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಸಮೀಪದ ಸಾಫ್ಟೆಕ್ ಇನ್ಫೋಗ್ರೂಪ್ ಎಂಬ ಅಧ್ಯಯನ ಕೇಂದ್ರ ಕಛೇರಿಯ ವಿಳಾಸ ಹೊಂದಿರುವ ಸಂಸ್ಥೆಯ ಮೂಲಕ ಮಹಾತ್ಮಾ ಮೆಮೋರಿಯಲ್ ಡಿಗ್ರಿ ಕಾಲೇಜನ್ನು ಪರೀಕ್ಷಾ ಕೇಂದ್ರವನ್ನಾಗಿ ನಿಯೋಜಿಸಿದ ದಾಖಲೆಗಳು ಕಂಡುಬಂದಿವೆ. ಆದರೆ ವಾರ್ಷಿಕ ಪರೀಕ್ಷೆಗಳು ಮಾತ್ರ ಬೇನಾಮಿ ಕೇಂದ್ರದಲ್ಲಿ ನಡೆಯುತ್ತಿರುವುದು ಗೋಚರಿಸಿದೆ.
ದಾಖಲೆಯಲ್ಲಿ ತಾವರೆಕೆರೆ ಬಳಿಯ ಎಂಜಿಎಂ ಕಾಲೇಜು ಪರೀಕ್ಷಾ ಕೇಂದ್ರವಾಗಿ ಕಂಡುಬಂದಿದ್ದು ದೂರಶಿಕ್ಷಣ ವಾರ್ಷಿಕ ಪರೀಕ್ಷೆ ಬೇನಾಮಿ ಕೇಂದ್ರದಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ಈ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆ ಎದುರಿಸುತ್ತಿರುವುದು ಒಂದೆಡೆಯಾದರೆ ಯಾವುದೇ ನಿಯಮಗಳು ಮಾತ್ರ ಅನ್ವಯಿಸುತ್ತಿಲ್ಲ ಎನ್ನಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಸರಬರಾಜು ಮಾಡುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ವಿತರಣೆ ಮಾಡುವ ವ್ಯವಸ್ಥೆ ಕೂಡ ಸಂಶಯಕ್ಕೆ ಎಡೆಮಾಡಿದೆ ಎಂಬುದು ಹಲವರ ಆರೋಪವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ತಾವು ಕುವೆಂಪು ಎಂಬ ಅಧ್ಯಯನ ಕೇಂದ್ರ ಕಛೇರಿಯ ವಿಳಾಸ ಹೊಂದಿರುವ ಸಂಸ್ಥೆಯ ಮೂಲಕ ಮಹಾತ್ಮಾ ಮೆಮೋರಿಯಲ್ ಡಿಗ್ರಿ ಕಾಲೇಜನ್ನು ಪರೀಕ್ಷಾ ಕೇಂದ್ರವನ್ನಾಗಿ ನಿಯೋಜಿಸಿದ ದಾಖಲೆಗಳು ಕಂಡುಬಂದಿವೆ. ಆದರೆ ವಾರ್ಷಿಕ ಪರೀಕ್ಷೆಗಳು ಮಾತ್ರ ಬೇನಾಮಿ ಕೇಂದ್ರದಲ್ಲಿ ನಡೆಯುತ್ತಿರುವುದು ಗೋಚರಿಸಿದೆ.
ದಾಖಲೆಯಲ್ಲಿ ತಾವರೆಕೆರೆ ಬಳಿಯ ಎಂಜಿಎಂ ಕಾಲೇಜು ಪರೀಕ್ಷಾ ಕೇಂದ್ರವಾಗಿ ಕಂಡುಬಂದಿದ್ದು ದೂರಶಿಕ್ಷಣ ವಾರ್ಷಿಕ ಪರೀಕ್ಷೆ ಬೇನಾಮಿ ಕೇಂದ್ರದಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ಈ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆ ಎದುರಿಸುತ್ತಿರುವುದು ಒಂದೆಡೆಯಾದರೆ ಯಾವುದೇ ನಿಯಮಗಳು ಮಾತ್ರ ಅನ್ವಯಿಸುತ್ತಿಲ್ಲ ಎನ್ನಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಸರಬರಾಜು ಮಾಡುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ವಿತರಣೆ ಮಾಡುವ ವ್ಯವಸ್ಥೆ ಕೂಡ ಸಂಶಯಕ್ಕೆ ಎಡೆಮಾಡಿದೆ ಎಂಬುದು ಹಲವರ ಆರೋಪವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ತಾವು ಕುವೆಂಪು ಇರುವುದಿಲ್ಲ. ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುವುದು. ಈಗಾಗಲೆ ಕೆಲವು ಕೇಂದ್ರಗಳಲ್ಲಿ ವಿಚಕ್ಷಣಾ ದಳದಿಂದ ಸಾಮೂಹಿಕ ನಕಲು ಪ್ರಕರಣಗಳನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲಾಗಿದೆ. ಕೂಡಲೇ ತಮ್ಮ ಕೇಂದ್ರದಿಂದ ಪರಿಶೀಲನಾ ಅಧಿಕಾರಿಯೊಬ್ಬರನ್ನು ಕುಶಾಲನಗರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ದೂರವಾಣಿ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ಡಾಕ್ಟರೇಟ್ ಪದವಿ, ನಕಲಿ ಡಿಗ್ರಿ, ಸ್ನಾತಕೋತ್ತರ ಪದವಿಗಳನ್ನು ನೀಡುವ ಕೇಂದ್ರಗಳು ಅಣಬೆಯಂತೆ ತಲೆ ಎತ್ತುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟದ ನಡುವೆ ಒಟ್ಟಾರೆ ಶಿಕ್ಷಣ ಕ್ಷೇತ್ರ ಕೂಡ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ ಎನ್ನಬಹುದು. ಇಂತಹ ಕೇಂದ್ರಗಳ ಬಗ್ಗೆ ಸಂಬಂಧಿಸಿದವರು ನಿಗಾವಹಿಸಿ ತಕ್ಷಣ ದಾಳಿ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಿದೆ ಎನ್ನುವುದು ನಾಗರಿಕರ ಆಗ್ರಹವಾಗಿದೆ.