ಗೋಣಿಕೊಪ್ಪಲು, ಫೆ.16: ಬೆಳೆದ ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ಇರುವ ಅಲ್ಪ,ಸ್ವಲ್ಪ ಕಾಫಿ ಬೆಳೆಯನ್ನು ಕುಯ್ಯುವ ದಾವಂತದಲ್ಲಿರುವ ರೈತನಿಗೆ ಒಂದೆಡೆ ಹುಲಿ, ಮತ್ತೊಂದೆಡೆ ಕಾಡಾನೆ ಕಾಟ ಆತಂಕ ತಂದೊಡ್ಡಿದೆ.ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಹುದಿಕೇರಿ, ಹರಿಹರ, ಬಿರುಗ, ಬಿರುನಾಣಿ, ಹೈಸೊಡ್ಲುರು, ಬೆಳ್ಳೂರು, ಬಾಳೆಲೆ, ನಿಟ್ಟೂರು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡುವರೆ ತಿಂಗಳಲ್ಲಿ ಹುಲಿ ದಾಳಿಗೆ 29 ಜಾನುವಾರುಗಳು ಬಲಿಯಾಗಿವೆ. ಶನಿವಾರ ಸಂಜೆ ವೇಳೆಯಲ್ಲಿ ಬೆಳ್ಳೂರು ಗ್ರಾಮದ ಕಿತ್ತಿರಾ ಗೋಪಾಲ್ ಎಂಬುವರಿಗೆ ಸೇರಿದ ಹಸುವನ್ನು ಕೊಂದು ಹಾಕಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗೋಣಿಕೊಪ್ಪಲು, ಫೆ.16: ಬೆಳೆದ ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ಇರುವ ಅಲ್ಪ,ಸ್ವಲ್ಪ ಕಾಫಿ ಬೆಳೆಯನ್ನು ಕುಯ್ಯುವ ದಾವಂತದಲ್ಲಿರುವ ರೈತನಿಗೆ ಒಂದೆಡೆ ಹುಲಿ, ಮತ್ತೊಂದೆಡೆ ಕಾಡಾನೆ ಕಾಟ ಆತಂಕ ತಂದೊಡ್ಡಿದೆ.ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಹುದಿಕೇರಿ, ಹರಿಹರ, ಬಿರುಗ, ಬಿರುನಾಣಿ, ಹೈಸೊಡ್ಲುರು, ಬೆಳ್ಳೂರು, ಬಾಳೆಲೆ, ನಿಟ್ಟೂರು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡುವರೆ ತಿಂಗಳಲ್ಲಿ ಹುಲಿ ದಾಳಿಗೆ 29 ಜಾನುವಾರುಗಳು ಬಲಿಯಾಗಿವೆ.

ಶನಿವಾರ ಸಂಜೆ ವೇಳೆಯಲ್ಲಿ ಬೆಳ್ಳೂರು ಗ್ರಾಮದ ಕಿತ್ತಿರಾ ಗೋಪಾಲ್ ಎಂಬುವರಿಗೆ ಸೇರಿದ ಹಸುವನ್ನು ಕೊಂದು ಹಾಕಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಧ್ಯ ಭಾಗದಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ರೈತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.ನಗದು ಪರಿಹಾರದ ಬದಲಿಗೆ ಹಸು ನೀಡುವಂತೆಯೂ, ಹುಲಿ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಪಟ್ಟು ಹಿಡಿದರು.ಅಧಿಕಾರಿಗಳು ಪರಿಹಾರವನ್ನು ತಕ್ಷಣ ನೀಡುವ ಕುರಿತು ಹೇಳಿದರಾದರು ರೈತರು ಮಾತ್ರ ತಮ್ಮ ಪಟ್ಟು ಸಡಿಲಿಸಲಿಲ್ಲ. ಅಂತಿಮವಾಗಿ ಕುಟ್ಟ ವೃತ್ತ ನಿರೀಕ್ಷರಾದ ಪರಶಿವಮೂರ್ತಿ ಮಧ್ಯಸ್ಥಿಕೆ ವಹಿಸುವ ಮೂಲಕ ಪ್ರತಿಭಟನೆ ಕೈ ಬಿಡುವಂತೆ ಮಾಡುವಲ್ಲಿ ಯಶಸ್ವಿಯಾದರು. ಸ್ಥಳದಲ್ಲಿಯೇ

(ಮೊದಲ ಪುಟದಿಂದ) ಪರಿಹಾರ ಚೆಕ್ ವಿತರಿಸಿದರು. ಹುಲಿ ಸೆರೆಗೆ ಬೋನ್ ಅಳವಡಿಸಿದರು.

ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಡಿಎಫ್‍ಒ ಶಿವಶಂಕರ್, ಎಸಿಎಫ್ ಶ್ರೀಪತಿ, ಶ್ರೀಮಂಗಲ ಠಾಣಾಧಿಕಾರಿ ದಿನೇಶ್ ಕುಮಾರ್ ಹಾಗೂ ಸಿಬ್ಬಂದಿ ಮೊಕ್ಕಾಂ ಹೂಡಿದ್ದರು. ಹಿರಿಯ ಅರಣ್ಯ ಅಧಿಕಾರಿಗಳ ದೂರವಾಣಿ ಸಂದೇಶ ಬಂದ ನಂತರ ಪ್ರತಿಭಟನೆ ಹಿಂಪಡೆಯುವ ಮೂಲಕ ಪರಿಹಾರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಮಾಯಮುಡಿ ಯ ಪುಚ್ಚಿಮಾಡ ರಾಯ್ ಮಾದಪ್ಪ, ಹುದಿಕೇರಿಯ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಬಲ್ಯಮಿದೇರಿರ ಪ್ರಕಾಶ್, ಮಂಡಂಗಡ ಯೊಗೇಶ್, ಬೊಜ್ಜಂಗಡ ಪೂಣಚ್ಚ, ಇಟ್ಟಿರ ಕುಶಾಲಪ್ಪ, ಪಂದಿಮಾಡ ಗಿರೀಶ್, ಆಲೆಮಾಡ ರಾಜ, ಮುಲ್ಲೆಂಗಡ ಶರಣು, ಇಟ್ಟಿರ ಪೊನ್ನಣ್ಣ, ಗಿರೀಶ್ ನೂರೆರ ಮನೋಜ್, ಮುಂತಾದವರು ಹಾಜರಿದ್ದರು.