ಸೋಮವಾರಪೇಟೆ, ಫೆ. 14: ತಾಲೂಕಿನ ಸಿದ್ದಲಿಂಗಪುರ-ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್‍ಜೀ ಅವರ ಮಾರ್ಗದರ್ಶನದಲ್ಲಿ ಶ್ರೀಮಂಜುನಾಥ ಸನ್ನಿಧಿಯಲ್ಲಿ ವಿವಿಧ ಅಭಿಷೇಕ, ಹೋಮ, ಮಹಾಮಂಗಳಾರತಿ, ನಂತರ ಶ್ರೀ ನವನಾಗ ಸನ್ನಿಧಿಯಲ್ಲಿ ತಂಬಿಲ ಪೂಜೆ, ಅಭಿಷೇಕ ಸೇರಿದಂತೆ ಪಂಚಮಿ ವಿಶೇಷ ಪೂಜಾ ಕೈಂಕರ್ಯಗಳು ಅರ್ಚಕರಾದ ಜಗದೀಶ್ ಉಡುಪ, ಪ್ರಸಾದ್ ಭಟ್, ವಾದಿರಾಜ್, ಮೋಹನ್ ಅವರುಗಳಿಂದ ನೆರವೇರಿತು.

ಸಿದ್ದಲಿಂಗಪುರ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.