ನಾಪೆÇೀಕ್ಲು, ಫೆ. 14: ವೈದ್ಯರು, ಸಿಬ್ಬಂದಿ, ಔಷಧಿ ಸೇರಿದಂತೆ ಎಲ್ಲಾ ಸೌಲಭ್ಯಗಳಿದ್ದರೂ, ಅಗತ್ಯಕ್ಕೆ ಬೇಕಾದ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಸಮೀಪದ ಬಲ್ಲಮಾವಟಿ ಪಶು ಚಿಕಿತ್ಸಾ ಕೇಂದ್ರದಲ್ಲಿ ಎದುರಾಗಿದೆ. ಸರಕಾರ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಲ್ಲಮಾವಟಿಯಲ್ಲಿ ಪಶು ಚಿಕಿತ್ಸಾ ಕೇಂದ್ರ ಆರಂಭಿಸಿ ವೈದ್ಯರ ನೇಮಕ, ಸಿಬ್ಬಂದಿ ನೇಮಕ, ಅಗತ್ಯ ಔಷಧಿಗಳನ್ನು ಪೂರೈಸಿ ಅನುಕೂಲ ಕಲ್ಪಿಸಿದೆ. ಆದರೆ ಇಲ್ಲಿ ಅಗತ್ಯಕ್ಕೆ ಬೇಕಾದ ನೀರಿಲ್ಲದೆ ವೈದ್ಯರು, ಸಿಬ್ಬಂದಿ ಹಾಗೂ ಇಲ್ಲಿಗೆ ಆಗಮಿಸುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದುದರಿಂದ ಸಂಬಂಧಿಸಿದವರು ನೀರು ಪೂರೈಕೆಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.