ಸೋಮವಾರಪೇಟೆ, ಫೆ. 14: ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಬಿಟಿಸಿಜಿ ಕಾಲೇಜಿನಲ್ಲಿ ‘ಪರಿಣಾಮಕಾರಿ ಸಾರ್ವಜನಿಕ ಭಾಷಣ’ ವಿಷಯದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಜೇಸಿ ಸೆನೆಟರ್ ಸಂದೀಪ್ ಅವರು ಭಾಗವಹಿಸಿ ಪರಿಣಾಮಕಾರಿ ಭಾಷಣದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಜೇಸಿ ತರಬೇತಿ ವಿಭಾಗದ ಉಪಾಧ್ಯಕ್ಷೆ ಮೀನಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೇಸಿ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಕಾರ್ಯದರ್ಶಿ ಮಂಜುಳಾ ಸುಬ್ರಮಣಿ, ನಿಕಟಪೂರ್ವ ಅಧ್ಯಕ್ಷ ನಾಗರಾಜ್, ಮಹಿಳಾ ವಿಭಾಗದ ಚೇರ್ ಪರ್ಸನ್ ವಿದ್ಯಾ ಸೋಮೇಶ್ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಜೇಸಿ ಪದಾಧಿಕಾರಿಗಳಾದ ಸೋಮೇಶ್, ಪ್ರದೀಪ್, ಸುದೀಪ್, ಮಂಜುನಾಥ್, ಜ್ಯೋತಿ ರಾಜೇಶ್, ಉಷಾ ಪ್ರಕಾಶ್, ಪವಿತ್ರ ಲಕ್ಷ್ಮೀಕುಮಾರ್, ನೆಲ್ಸನ್, ಆಶಾ ಪ್ರದೀಪ್ ಸೇರಿದಂತೆ ಇತರರು ಹಾಜರಿದ್ದರು.