ಕೂಡಿಗೆ, ಫೆ. 14: ಚಿಕ್ಕಅಳುವಾರ ಹಾಲು ಉತ್ಪಾದಕರ ಸಹಕಾರ ಸಂಘದ 2020-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಹೆಚ್.ಎಂ. ಸಂತೋಷ್ ಮತ್ತು ಉಪಾಧ್ಯಕ್ಷರಾಗಿ ಎ.ಸಿ. ಹರೀಶ್ ಅವಿರೋಧವಾಗಿ ಆಯ್ಕೆಗೊಂಡರು.

ಆಡಳಿತ ಮಂಡಳಿಯ ನಿರ್ದೇಶಕರಾಗಿ ವಿ.ಟಿ. ಗೋವಿಂದಪ್ಪ, ಎಂ.ಎಲ್. ದೇವರಾಜ್, ಎ.ಎ. ಸೋಮೇಗೌಡ, ಟಿ.ಹೆಚ್. ರಾಮಚಂದ್ರ, ಎ.ಹೆಚ್. ಶಿವಶಂಕರ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಂಕುಮಾರ್ ಹಾಗೂ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.