ಮಡಿಕೇರಿ, ಫೆ. 14: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ತಾ. 19 ರಂದು ಬೆಳಿಗ್ಗೆ 10 ಗಂಟೆಗೆ ‘ವಿಧಾನಸೌಧ ಚಲೋ ಸರ್ಕಾರಿ ನಿವೃತ್ತ ನೌಕರರ ನಡೆ ವಿಧಾನಸೌಧದ ಕಡೆ’ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

ತಾ. 19 ರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ನಗರದ ರೈಲ್ವೆಸ್ಟೇಷನ್‍ನ ಹತ್ತಿರ ಇರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆನಂದ ರಾವ್ ವೃತ್ತದ ಮುಖಾಂತರ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶಗೊಳ್ಳಲಿದೆ. ಈ ಸಮಾವೇಶದಲ್ಲಿ ನಿವೃತ್ತ ನೌಕರರು ಭಾಗವಹಿಸಬೇಕಾಗಿ ಕೊಡಗು ಜಿಲ್ಲಾಧ್ಯಕ್ಷರು ಕೋರಿದ್ದಾರೆ.