ಸಿದ್ದಾಪುರ, ಫೆ. 14: ಗುಹ್ಯ ಹಾಗೂ ಕರಡಿಗೋಡು ವ್ಯಾಪ್ತಿಯ ಪ್ರವಾಹ ಸಂತ್ರಸ್ತರು ಸೂರಿಗಾಗಿ ನಡೆಸುತ್ತಿರುವ ಆಹೋರಾತ್ರಿ ಹೋರಾಟಕ್ಕೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಆಟೋ ಚಾಲಕರ ಸಂಘ ಬೆಂಬಲ ನೀಡಿದ್ದು, ತಾ. 15ರಂದು (ಇಂದು) ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಆಟೋ ಚಾಲನೆ ಸ್ಥಗಿತಗೊಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಲೀಂ ತಿಳಿಸಿದ್ದಾರೆ.