ಸೋಮವಾರಪೇಟೆ, ಫೆ. 14: ಮಡಿಕೇರಿಯ ಗಾಳಿಬೀಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 18 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಅವರು ಚಾಲನೆ ನೀಡಿದರು. ನವೋದಯ ವಿದ್ಯಾಲಯದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪೋಷಕರು, ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅವರು ಜನವರಿ 8ರಂದು ವಿದ್ಯಾಲಯಕ್ಕೆ ಭೇಟಿ ನೀಡಿ (ಮೊದಲ ಪುಟದಿಂದ) ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರಲ್ಲದೇ, ಆದಷ್ಟು ಶೀಘ್ರವಾಗಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 18 ಲಕ್ಷ ಬಿಡುಗಡೆ ಮಾಡಿದ್ದು, ಇದರಲ್ಲಿ ಸೋಲಾರ್, ನೀರಿನ ಪೈಪ್ ಲೈನ್, ಹಾಸ್ಟೆಲ್ ಕಟ್ಟಡ ದುರಸ್ತಿಗಳು ನಡೆಯಲಿವೆ.
ಈ ಸಂದರ್ಭ ವಿದ್ಯಾಲಯದ ಪ್ರಾಂಶುಪಾಲ ಐಸಾಕ್, ಶಿಕ್ಷಕರು-ಪೋಷಕರ ಸಮಿತಿ ಸದಸ್ಯರಾದ ಆಶಿಕಾ, ಜಯಕುಮಾರ್, ಪೋಷಕರಾದ ಚಿದಾನಂದ, ಪುಟ್ಟೇಗೌಡ, ಸೋಮವಾರಪೇಟೆ ಪ.ಪಂ. ಸದಸ್ಯ ಶುಭಕರ್, ನಿರ್ಮಿತಿ ಕೇಂದ್ರದ ಅಧಿಕಾರಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.ನವೋದಯ ವಿದ್ಯಾಲಯದಲ್ಲಿ
ರೂ. 18 ಲಕ್ಷದ ಕಾಮಗಾರಿಗೆ ಚಾಲನೆ