ಮಡಿಕೇರಿ, ಫೆ.14: ಮಾರ್ಚ್ ತಿಂಗಳಲ್ಲಿ ಮಂಡನೆಯಾಗುವ ಮುಂಗಡ ಪತ್ರದಲ್ಲಿ (ಬಜೆಟ್) ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಪ್ರಕಟಿಸಲು ಮುಖ್ಯಮಂತ್ರಿಯವರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕÀ ಕೆ.ಜಿ.ಬೋಪಯ್ಯ ಅವರು ಕೋರಿದ್ದಾರೆ. 2020-21 ನೇ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಲಿರುವ ಮುಂಗಡ ಪತ್ರದಲ್ಲಿ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳ ಈಡೇರಿಕೆಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಮತ್ತು ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ವಿಚಾರವನ್ನು ಬಜೆಟ್‍ನಲ್ಲಿ ಸೇರಿಸಿ ಮಂಡಿಸುವಂತೆ ಅವರು ಕೋರಿದ್ದಾರೆ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ರೂ. 100 ಕೋಟಿ, ಜಿಲ್ಲೆಯ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ರೂ. 1 ಕೋಟಿ, ಜಿಲ್ಲೆಯ ವಿವಿಧ ಜನಾಂಗಗಳು ನಡೆಸುತ್ತಿರುವ ಕ್ರೀಡಾಕೂಟಗಳಿಗಾಗಿ ಅಂದರೆ
ಬಜೆಟ್: ಹೆಚ್ಚಿನ ಹಣ ಘೋಷಿಸಲು ಕೆ.ಜಿ ಬೋಪಯ್ಯ ಮನವಿ
(ಮೊದಲ ಪುಟದಿಂದ) ಹಾಕಿ, ಕ್ರಿಕೆಟ್ ಮುಂತಾದ ಕ್ರೀಡೆಗಳಿಗಾಗಿ ರೂ 1 ಕೋಟಿ, ವಿಪರೀತವಾಗಿರುವ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ರೈಲ್ವೇ ಕಂಬಿ ತಡೆಬೇಲಿ ನಿರ್ಮಾಣಕ್ಕೆ ರೂ 25 ಕೋಟಿ, ವಿವಿಧ ಜನಾಂಗಗಳಾದ ಕೊಡವ, ಅರೆಭಾಷೆ ಗೌಡ, ಒಕ್ಕಲಿಗ, ಬಿಲ್ಲವ, ಬಂಟ ಮತ್ತಿತರ ಹಿಂದುಳಿದ ಸಮುದಾಯ ಭವನಗಳ ಅಭಿವೃದ್ಧಿ ಮತ್ತು ನಿರ್ಮಾಣಕ್ಕೆ ರೂ. 15 ಕೋಟಿ, ಜಿಲ್ಲೆಯ ಬೆಳೆಗಾರರಿಗೆ 10 ಎಕರೆ ಒಳಪಟ್ಟಂತೆ 10 ಎಚ್.ಪಿ ವಿದ್ಯುತ್‍ನ್ನು ಉಚಿತವಾಗಿ ನೀಡುವಂತೆ ಘೋಷಣೆ ಮಾಡಬೇಕಾಗಿ ಮುಖ್ಯಮಂತ್ರಿ ಅವರಲ್ಲಿ ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದ್ದಾರೆ.