ವೀರಾಜಪೇಟೆ, ಫೆ. 13: ಕೆಲವು ಕ್ರೀಡೆಗಳು ಪ್ರಚಲಿತವಾಗಿ ವೇಗವನ್ನು ಕಂಡುಕೊಳ್ಳುತ್ತಿವೆ ಆದರೆ ದೇಶೀಯ ಕ್ರೀಡೆಗಳು ಅಳಿವಿನಂಚಿನಲ್ಲಿದ್ದರೂ ಈ ಬಗ್ಗೆ ಆಸಕ್ತಿ ತೋರದಿರುವುದು ವಿಷಾದಕರ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ವೀರಾಜಪೇಟೆ ನಗರದ ಉತ್ಸಾಹಿ ಯುವಕರ ಡ್ಯೂಡ್ಸ್ ಸಂಸ್ಥೆಯ ನಾಲ್ಕನೇ ವರ್ಷದ ಪ್ರಯುಕ್ತ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಹೊನಲು ಬೆಳಕಿನ ಕಬಡ್ಡಿ ಪ್ರಿಮಿಯರ್ ಲೀಗ್‍ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾದಕ ವ್ಯಸನದ ಕಡೆ ಮನಸ್ಸು ವಾಲುವುದಿಲ್ಲ ಎಂದು ಹೇಳಿದರು.
ನಗರ ಭಾ.ಜ.ಪ. ಅಧ್ಯಕ್ಷ ಅಂಜಪರುವಂಡ ಅನೀಲ್ ಮಾತನಾಡಿ, ಕಬಡ್ಡಿಯು ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತಿದ್ದು ಕ್ರೀಡಾ ಸಂಸ್ಥೆಗಳು ಕಬಡ್ಡಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ ಹರ್ಷವರ್ದನ, ಉದ್ಯಮಿಗಳಾದ ಬಿ.ವಿ ಹೇಮಂತ್, ಬಿ.ಜೆ. ಬೋಪಣ್ಣ, ದಾನಿಗಳಾದ ಪ್ರವೀಣ್, ಗಜೇಂದ್ರ ಅಕಾಶ್, ತೀರ್ಥಕುಮಾರ್. ಸೈಫುದ್ದೀನ್ ಪಾಲ್ಗೊಂಡು ಪಂದ್ಯಾಟವನ್ನು ವೀಕ್ಷಣೆ ಮಾಡಿದರು.
ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳಿಂದ 56 ಪಂದ್ಯಾಟಗಳು ನಡೆದವು. ಪ್ರಥಮ ಸೆಮಿಫೈನಲ್ ಪಂದ್ಯಾಟ ಟೀಮ್ ಸ್ಪೀರಿಟ್ ಮತ್ತು ಅಭಿಮನ್ಯು ವಾರಿಯರ್ಸ್ ತಂಡಗಳ ಮಧ್ಯೆ ನಡೆದು 27-21 ಅಂಕಗಳಿಂದ ಅಭಿಮನ್ಯು ವಾರಿಯರ್ಸ್ ತಂಡ ವಿಜೇಯವಾಯಿತು. ದ್ವಿತೀಯ ಸೆಮಿಫೈನಲ್ ಪಂದ್ಯಾಟ ಇಗಲ್ ರೈಡರ್ಸ್ ಮತ್ತು ರಾಯಲ್ ಬುಲ್ಸ್ ತಂಡಗಳ ಮಧ್ಯೆ ನಡೆದು 22-14 ಅಂಕಗಳಿಂದ ರಾಯಲ್ ಬುಲ್ಸ್ ತಂಡ ವಿಜಯವಾಯಿತು. ತೃತೀಯ ಸೆಮಿಫೈನಲ್ ಪಂದ್ಯಾಟ ಟೀಮ್ ಸ್ಪಿರಿಟ್ ಮತ್ತು ರಾಯಲ್ ಬುಲ್ಸ್ ತಂಡಗಳ ಮಧ್ಯೆ ನಡೆದು 27-21 ಅಂಕಗಳಿಂದ ಟೀಮ್ ಸ್ಪಿರಿಟ್ ತಂಡ ಫೈನಲ್‍ಗೆ ಅರ್ಹತೆ ಪಡೆಯಿತು.
ಫೈನಲ್ ಪಂದ್ಯಾಟವು ಟೀಮ್ ಸ್ಪಿರಿಟ್ ಮತ್ತು ಅಭಿಮನ್ಯು ವಾರಿಯರ್ಸ್ ತಂಡಗಳ ಮಧ್ಯೆ ನಡೆದು 50-27 ಅಂತರದ ಅಂಕಗಳಿಸಿ ವಿಜಯ ಮಾಲೆ ಧರಿಸಿತು.
ಟೀಮ್ ಸ್ಪೀರಿಟ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ವಿಚೇತರಿಗೆ ಸಂಸ್ಥೆಯ ವತಿಯಿಂದ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಉತ್ತಮ ಮುನ್ನಡೆ ಆಟಗಾರ ಪುರಸ್ಕಾರವನ್ನು ಅಭಿಮನ್ಯು ವಾರಿಯರ್ಸ್ ತಂಡದ ಗಣೇಶ್ ಪಡೆÀದುಕೊಂಡರು, ಉತ್ತಮ ಹಿಡಿತಗಾರ ಪುರಸ್ಕಾರವನ್ನು ರಾಯಲ್ ಬುಲ್ಸ್ ತಂಡದ ಸಂಜು ಅವರು ಪಡೆದುಕೊಂಡರು. ಆರ್.ಎಫ್. ರಜತಾಧ್ರಿ ಉತ್ತಮ ತಂಡವಾಗಿ ಹೊರಹೊಮ್ಮಿತ್ತು.
ಪಂದ್ಯಾಟದ ತೀರ್ಪುಗಾರರಾಗಿ ಸುಬ್ರಮಣ್ಯ ನಿವಾಸಿಗಳಾದ ಅಬ್ದುಲ್ ರಹೀಮ್ ಮತ್ತು ಸುರೇಶ್ ಅವರುಗಳು ಕಾರ್ಯನಿರ್ವಹಿಸಿದರು. ನಿಶ್ಮ, ಅಂಜಲಿ ಉಡುಪಿಯ ಗಜûಲ್ ಮತ್ತು ವಿನೋದ್ ಅವರುಗಳು ವೀಕ್ಷಕ ವಿವರಣೆಯನ್ನು ನೀಡಿದರು. ಪಂದ್ಯಾಟದ ಆಯೋಜಕರಾದ ಲಕ್ಷಿ ್ಮೀಶ್ ಅಭಿಜೀತ್, ಹೇಮಂತ್, ನೀತಿನ್ ಮತ್ತು ಸಂಸ್ಥೆಯ ಸದಸ್ಯರು ನಗರವಲ್ಲದೆ ವಿವಿಧ ಸ್ಥಳಗಳಿಂದ ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
- ಕೆ.ಕೆ.ಎಸ್.