ಮತ್ತೊಮ್ಮೆ ಫೆಬ್ರವರಿ 14 ಬಂದಿದೆ. ಮುಂದಿನ ವರ್ಷವೂ ಕೂಡ ಫೆಬ್ರವರಿ 14 ಬರಲಿದೆ ಅಲ್ವಾ? ಫೆಬ್ರವರಿ ತಿಂಗಳು ಅಂದರೆ ಸಾಕು ಎಲ್ಲರಿಗೂ ತಕ್ಷಣ ನೆನಪು ಬರುವುದು ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಹೌದು ಫೆಬ್ರವರಿ 14 ಪ್ರೇಮಿಗಳ ದಿನ. ಕ್ರಿ.ಶ 269 ಇಸವಿಯಿಂದ ವ್ಯಾಲೆಂಟೈನ್ಸ್ ಡೇ ಆಚರಣೆಯಲ್ಲಿದೆ. ನಾವೆಲ್ಲರೂ ಜೀವನ ನಡೆಸುತ್ತಿರುವುದು ಆಧುನಿಕ ಯುಗ, 21ನೇ ಶತಮಾನದಲ್ಲಿ, ಈ ಯುಗವನ್ನು ಕಂಪ್ಯೂಟರ್ ಯುಗವೆಂದು ಕರೆಯುತ್ತಾರೆ.

ಲವ್, (ಪ್ರೇಮ) ಈ ವಿಷಯದ ಬಗ್ಗೆ ಪುಟಾಣಿಗಳಿಗೂ ಗೊತ್ತಿದೆ. ಟಿವಿ, ಸಿನಿಮಾಗಳಲ್ಲಿ ನೋಡಿ ಕಲಿತಿರುತ್ತಾರೆ. ಹೌದು ಕಾಲ ಚಕ್ರ ತಿರುಗಿದಾಗ ಕಾಲಕ್ಕೆ ತಕ್ಕಂತೆ ನಾವೂ ತಿರುಗುವುದು ಸಹಜ. ಅದೇನೆ ಇರಲಿ ಬಿಡಿ ನಾವೀಗ ಪ್ರೇಮಿಗಳ ವಿಷಯಕ್ಕೆ ಬರೋಣ. ಲವ್, ಲವ್, ಲವ್, ಬಹುತೇಕ ಸ್ನೇಹಿತರು, ತಮ್ಮ ಫ್ರೆಂಡ್ಸ್‍ಗಳೊಂದಿಗೆ ಕೇಳುವ ಪ್ರಶ್ನೆ, ಹೇ ಬ್ರೋ ನಿನಗೆ ಲವ್ ಉಂಟಾ ಕಣೋ? ಅಂಥ. ಈ ಪ್ರಶ್ನೆ ಕೇಳುವವರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಒಂದಷ್ಟು ಜಾಸ್ತಿಯೇ ಇರುತ್ತೆ. ಲವ್ ಮಾಡೋದು ತಪ್ಪೋ ? ಸರಿಯೋ ? ಎಂಬ ಪ್ರಶ್ನೆ ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಸಹಜವಾಗಿ ಕಾಡುತ್ತಿರುತ್ತದೆ.

ಏಕೆಂದರೆ ಪ್ರೇಮಿಗಳ ಕೆಲವೊಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ ಕೇಳಿ. ಹೌದು ಈ ಕಂಪ್ಯೂಟರ್ ಯುಗದಲ್ಲಿ ಯಾರು ಏನೇ ಮಾಡಿದರೂ, ತಕ್ಷಣ ಒಬ್ಬರಾದರೂ ತಿಳಿಯದೇ ಇರಲು ಸಾಧ್ಯವೇ ಇಲ್ಲ. ಬಹುತೇಕ ಪ್ರೇಮ ಕಥೆಗಳನ್ನು ಕೇಳಿದರೆ ನಮಗೆ ಒಂದೆರಡು ಸಿನಿಮಾಗಳನ್ನು ನಿರ್ಮಾಣ ಮಾಡಬಹುದು. ಯುವಕ -ಯುವತಿಯರಿಗೆ ಲವ್ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಲವ್ ಅಂದ್ರೆ ಟೈಮ್ ಪಾಸ್,ಸೆಕ್ಸ್, ಲವ್ ಜಸ್ಟ್ ಇಂಟ್ರೆಸ್ಟ್, ಈಗೇ ಹಲವಾರು ತಪ್ಪು ಕಲ್ಪನೆಗಳಿವೆ. ಪ್ರೇಮ ಅಂದರೆ ಅದೊಂದು ಲೋಕ ಪ್ರೇಮಿಗಳಿಗೆ. ಆ ಪ್ರೇಮ ಲೋಕದಲ್ಲಿ ಪ್ರೇಮಿಗಳು ಮುಳುಗಿ, ತಮ್ಮ ಸಂತೋಷ, ದುಃಖ ಇನ್ನಿತರ ಎಲ್ಲಾ ವಿಷಯಗಳನ್ನು ಪರಸ್ಪರ ಶೇರ್ ಮಾಡಿ, ಪ್ರೀತಿಯನ್ನು ಮುಂದುವರೆಸುತ್ತಾರೆ. ನಮ್ಮ ನಡುವೆ ಹತ್ತಾರು ವರ್ಷಗಳಿಂದ ಪ್ರೀತಿ ಮಾಡುತ್ತಾ ಬಂದಿರುವ ಪ್ರೇಮಿಗಳೂ ಇದ್ದಾರೆ, ಒಂದೆರಡು ದಿನಗಳಲ್ಲಿ ಬ್ರೇಕ್ ಫೇಲ್ ಆಗಿ ಪ್ರೀತಿ ಮುರಿದು ಬಿದ್ದದ್ದೂ ಇದೆ.

ಇತ್ತೀಚಿನ ವರ್ಷಗಳಲ್ಲಿ ಪ್ರೇಮ ವೈಫಲ್ಯಕ್ಕೆ ನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ವಿಷಯಗಳು ಹೆಚ್ಚಾಗುತ್ತಿವೆ. ಪ್ರೀತಿ ಅರ್ಧದಲ್ಲೇ ಮುರಿದು ಬೀಳಲು ಕಾರಣವೇನು ? ಈ ವಿಷಯದ ಬಗ್ಗೆ ಯಾವ ಪ್ರೇಮಿಗಳೂ ಚಿಂತನೆ ಮಾಡಿರುವುದಿಲ್ಲ. ಆದರೆ ಇದಕ್ಕೆ ಆತ್ಮಹತ್ಯೆ ಖಂಡಿತ ಪರಿಹಾರವಲ್ಲ. ಪ್ರೀತಿ ಅರ್ಧದಲ್ಲೇ ಮುರಿಯಲು ಕಾರಣವೇನೆಂದರೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿರುವುದು. ಹುಡುಗಿಯರು ತಾವು ಪ್ರೀತಿಸುವ ಹುಡುಗನ ಬಗ್ಗೆ ಹಾಗೂ ಹುಡುಗರು ತಾವು ಪ್ರೀತಿಸುವ ಯುವತಿಯ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು ಲವ್ ಮಾಡಿದರೆ ತಮ್ಮ ಪ್ರೀತಿ ಎಂದಿಗೂ ಮುರಿದು ಬೀಳುವುದಿಲ್ಲ.

ಒಬ್ಬ ಯುವಕ-ಯುವತಿಯನ್ನು ಪಾರ್ಕ್, ಪ್ರವಾಸಿ ತಾಣಗಳಲ್ಲಿ ಕಂಡರೆ ಇಲ್ಲದ ವಿಷಯಗಳನ್ನು ಸೃಷ್ಟಿ ಮಾಡುವ ಜನರಿದ್ದಾರೆ. ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ, ಆ ಯುವಕ-ಯುವತಿಯ ಮಾನ ಹರಾಜು ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಮುಂದೆ ಇದೆ. ಸರಿಯಾದ ಲವ್ ಆರಂಭವಾಗುವದು ಕಾಲೇಜಿನಿಂದ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಗಳ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತೆ.

ತಮ್ಮ ಲವ್ವರ್ಗೆ ರಾತ್ರಿ , ಮೆಸೇಜ್, ಚಾಟಿಂಗ್, ಕಾಲ್ ಮಾಡದ ಪ್ರೇಮಿಗಳು ವಿರಳ. ‘ನಾನು ಮೆಸೇಜ್ ಮಾಡುವುದು ತಂದೆ-ತಾಯಿಗೆ ತಿಳಿದರೆ, ಹಾಗೂ ನಮ್ಮ ಪ್ರೀತಿ ವಿಷಯ ಗೊತ್ತಾದರೆ ? ಹೀಗೇ ಹಲವು ಊಹೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆಯಲ್ಲಿ ಯುವತಿಯರೂ ಹೆಚ್ಚಾಗಿದ್ದಾರೆ.

ಪೋಷಕರು ತಾಳ್ಮೆ ವಹಿಸಿ : ತಮ್ಮ ಮಗಳು, ಮಗ, ಪ್ರೀತಿ ಮಾಡುವ ವಿಷಯ ತಮಗೆ ತಿಳಿದರೆ ಕೊಂಚ ತಾಳ್ಮೆ ವಹಿಸುವುದು ಒಳ್ಳೆಯದು. ತಾವು ಉದ್ರೇಕ್ಕೊಳಗಾಗಿ ತಮ್ಮ, ಮಗ ಅಥವಾ ಮಗಳನ್ನು ಶಿಕ್ಷಿಸಿದರೆ, ಅವರು ಆತ್ಮಹತ್ಯೆಗೆ ಮುಂದಾಗಬಹುದು; ಮುನ್ನೆಚ್ಚರಿಕೆಯಿರಲಿ.

- ಕೆ.ಎಂ ಇಸ್ಮಾಯಿಲ್ ಕಂಡಕರೆ