ಶನಿವಾರಸಂತೆ, ಫೆ. 13: ಶನಿವಾರಸಂತೆ ಪೊಲೀಸರು ಸಾರ್ವಜನಿಕರಿಗೆ ಈ ಕೆಳಗಿನ ಸಲಹೆ ನೀಡಿದ್ದಾರೆ.
ಮಹಿಳೆಯರು ಸಾಯಂಕಾಲ ಮತ್ತು ಬೆಳಗ್ಗೆ ವಾಯುವಿಹಾರಕ್ಕೆ ಹೋಗುವಾಗ ಮೈಮೇಲಿನ ಬೆಲೆ ಬಾಳುವ ಆಭರಣಗಳನ್ನು ಮನೆಯಲ್ಲಿ ಭದ್ರವಾಗಿಟ್ಟು ಹೋಗುವುದು; ನಿಮ್ಮ ಏರಿಯಾಗಳಲ್ಲಿ ಅನುಮಾನಾಸ್ಪದವಾಗಿ ಬೈಕ್ ಮೇಲೆ ತಿರುಗಾಡುವವರು ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಿ; ಸರಗಳ್ಳತನಕ್ಕೆ ಪ್ರಯತ್ನಿಸಿದಲ್ಲಿ ವಾಹನದ ಸಂಖ್ಯೆಯನ್ನು ಬರೆದುಕೊಳ್ಳಿ; ಮಹಿಳೆಯರು ವೃದ್ದರೂ ಅಂಗಡಿ, ಇತರೆ ಕಡೆಗೆ ಒಂಟಿಯಾಗಿ ಹೋಗಬೇಡಿ.
ಮಹಿಳೆಯರು ಮದುವೆ ಇತರೆ ಕಾರ್ಯಕ್ರಮಗಳಿಗೆ ಮೈಮೇಲೆ ಹೆಚ್ಚು ಹೆಚ್ಚು ಬಂಗಾರದ ಆಭರಣಗಳನ್ನು ಧರಿಸಬೇಡಿ; ಮಹಿಳೆಯರು ರಾತ್ರಿ ಮಲಗುವಾಗ ಮನೆಯ ಕಿಟಕಿ ಹಾಗೂ ಪಕ್ಕದಲ್ಲಿ ಬಂಗಾರದ ಆಭರಣಗಳನ್ನು ಇಡಬೇಡಿ; ಗ್ಯಾಸ್ ರಿಪೇರಿ,ಸರ ಮಾರಾಟ, ಇತರ ನೆಪದಲ್ಲಿ ಮನೆಗೆ ಬರುವವರ ಬಗ್ಗೆ ಎಚ್ಚರಿಕೆಯಿಂದ ಇರಿ; ಯಾರಾದರೂ ಬ್ಯಾಂಕ್‍ನಿಂದ ಕರೆ ಮಾಡಿರುವುದಾಗಿ ತಿಳಿಸಿ ನಿಮ್ಮ ಎ.ಟಿ.ಎಮ್. ರಹಸ್ಯ ಸಂಖ್ಯೆ, ಓ.ಟಿ.ಪಿ. ನಂಬರ್ ಕೇಳಿದರೆ ನೀಡಬೇಡಿ ಖುದ್ದಾಗಿ ಬ್ಯಾಂಕ್‍ಗೆ ಖುದ್ದು ಭೇಟಿ ನೀಡಿ ವಿಚಾರಿಸಿ ಬಸ್, ಖಾಸಗಿ ಟ್ರಾವೆಲ್ಸ್‍ಗಳಲ್ಲಿ ಪ್ರಯಾಣಿಸುವಾಗ ಬೆಲೆ ಬಾಳುವ ಆಭರಣಗಳ ಬಗ್ಗೆ ಎಚ್ಚರ ವಹಿಸಿ, ಎ.ಟಿ.ಎಮ್.ಗಳಲ್ಲಿ ಹಣ ತೆಗೆಯಲು ಬೇರೆಯವರ ಸಹಾಯ ಕೇಳಬೇಡಿ.
ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ ಪೊಕರಿಗಳು ಚುಡಾಯಿಸಿದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರವಾಸ ಅಥವಾ ದೂರದ ಊರುಗಳಿಗೆ ಮನೆಗೆ ಬೀಗ ಹಾಕಿ ಹೋಗುವಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿ; ಮನೆ ಕೆಲಸಗಾರರ ಬಗ್ಗೆ ಸಂಪೂರ್ಣ ವಿಳಾಸ ಅವರ ಪೂರ್ವಾಪರ ತಿಳಿದುಕೊಂಡು ಕೆಲಸಕ್ಕೆ ನೇಮಿಸಿಕೊಳ್ಳಿ; ಅಪರಿಚಿತರಿಗೆ/ ಅಂತರಾಜ್ಯ ನಿವಾಸಿಗಳಿಗೆ ಮನೆ ಬಾಡಿಗೆ ನೀಡುವಾಗ ಅವರ ದಾಖಲೆಗಳನ್ನು ಪರಿಶೀಲಿಸಿ ಮನೆ ಬಾಡಿಗೆಗೆ ಕೊಡಿ ಮತ್ತು ಠಾಣೆಗೂ ಮಾಹಿತಿ ನೀಡಿ; ಬೀಟ್ ಪೊಲೀಸರು ಏರಿಯಾದಲ್ಲಿ ಗಸ್ತು ಬಂದಾಗ ಅವರೊಂದಿಗೆ ಸಹಕರಿಸಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ; ಮಕ್ಕಳ ಕೈಯಲ್ಲಿ ಬೈಕ್ ನಡೆಸಲು ಕೊಡಬೇಡಿ; ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ನಕಲು ಪ್ರತಿ ಯಾವಾಗಲು ನಿಮ್ಮ ಹತ್ತಿರ ಇಟ್ಟುಕೊಳ್ಳಿ.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ; ಯಾವುದೇ ಕಾರಣಕ್ಕೂ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸ ಬೇಡಿ; ವಾಹನಗಳನ್ನು ಸರಿಯಾಗಿ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲ್ಲಿಸಿ, ಹ್ಯಾಂಡ್ಲಾಕ್ ಹಾಕಿ; ಸಂಚಾರ ನಿಯಮ ಗಳನ್ನು ಪಾಲಿಸಿ; ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚುಶಾಲಾ ಮಕ್ಕಳನ್ನು ಹತ್ತಿಸಕೊಳ್ಳಬೇಡಿ; ಒಂಟಿ ಮಹಿಳೆಯರು ಆಟೋಗಳಲ್ಲಿ ಪ್ರಯಾಣಿಸುವಾಗ ಮೊದಲು ಆಟೋ ನಂಬರ್ ಬರೆದುಕೊಳ್ಳಿ,ಚಾಲಕನ ಬಗ್ಗೆ ಮಾಹಿತಿ ಪಡೆಯಿರಿ ಮತ್ತು ನೀವು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ ಇಲ್ಲದಿದ್ದಲ್ಲಿ ತಕ್ಷಣವೇ ಠಾಣೆಗೆ ಸಂಪರ್ಕಿಸಿ; ರಸ್ತೆ ತಿರುವು,ಶಾಲಾ ಕಾಲೇಜುಗಳು, ಆಸ್ಪತ್ರೆಗಳ ಹತ್ತಿರ ವಾಹನಗಳನ್ನು ನಿಧಾನವಾಗಿ ಚಲಾಯಿಸಿ.
ಮಹಿಳೆಯರು ಫೆಸ್ ಬುಕ್, ಟಿಕ್ಟಾಕ್ ಇತರ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್ ಹಾಕಬೇಡಿ, ಅಪರಿಚಿತರ ಸ್ನೇಹ ವಿನಂತಿ ತಿರಸ್ಕರಿಸಿ; ನಕಲಿ ಫೇಸ್ ಬುಕ್, ವ್ಯಾಟ್ಸಪ್ ಖಾತೆಗಳ ಬಗ್ಗೆ ನಿಗಾ ವಹಿಸಿ; ಫೇಸ್ ಬುಕ್‍ಗಳಲ್ಲಿ ಮತಿಯ ಇತರ ಪ್ರಚೋಧನಾತ್ಮಕ ಹೇಳಿಕೆ ಟ್ಯಾಗ್ ಮಾಡಬೇಡಿ,ಲೈಕ್ ಮತ್ತು ಶೇರ್ ಮಾಡಬೇಡಿ; “ನೀವು ಎಚ್ಚರಿಕೆಯಿಂದ ಇರಿ; ಇತರರಿಗೂ ಎಚ್ಚರಿಕೆಯಿಂದ ಇರಲು ತಿಳಿಸಿ”
“ಕೊಡಗು ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ” ಎಂದು ಶನಿವಾರಸಂತೆ ಪೊಲೀಸ್ ಠಾಣೆ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ ಠಾಣೆಗೆ ಸಂಪರ್ಕಿಸುವಂತೆ ಸಲಹೆ ನೀಡಿದೆ. ದೂ. 08276-283333.