ನಾಪೆÇೀಕ್ಲು, ಫೆ. 13: ಒಕಿನೊವ ಷೋರಿನ್-ರಿಯೋ ಕರಾಟೆ ಡೂ ಆಫ್ ಇಂಡಿಯಾ ಮತ್ತು ಇಂಟರ್‍ನ್ಯಾಷನಲ್ ಮಬೂನಿ-ಹ ಶಿಟೊ-ರಿಯೋ ಕರಾಟೆ ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ನಡೆದ 27ನೇ ರಾಜ್ಯಮಟ್ಟದ ಕರಾಟೆ ಮತ್ತು ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನಿಂದ ಭಾಗವಹಿಸಿದ ನಾಪೆÇೀಕ್ಲು ಸೆಕ್ರೇಡ್ ಹಾಟ್ರ್ಸ್ ಶಾಲೆಯ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಮತ್ತು ಧೀರಜ್ ಕಾರ್ಯಪ್ಪ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಪದಕಗಳನ್ನು ಗಳಿಸುವದರ ಮೂಲಕ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಇವರು ನ್ಯಾಷನಲ್ ರೆಫ್ರಿ ಸೆನ್ಸಾಯಿ ನಾಗೇಂದ್ರಪ್ಪ ಅವರ ಶಿಷ್ಯರಾಗಿದ್ದು, ನೆಲಜಿ ಗ್ರಾಮದ ಚೆಟ್ಟಿಯಾರಂಡ ಮನು ಮತ್ತು ಪವಿ ದಂಪತಿಗಳ ಪುತ್ರರಾಗಿದ್ದಾರೆ.