ಮಡಿಕೇರಿ, ಫೆ. 13: ಅಖಿಲ ಭಾರತ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಗರದ ಮಧುಕೃಪದಲ್ಲಿ ನಡೆದ ದಾಸರಪದಗಳು ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಲಾಸ್ಯ ಕೋಡಿ ಚಂದ್ರಶೇಖರ್, ದ್ವಿತೀಯ ಸ್ಥಾನವನ್ನು ಸ್ಮøತಿ ಬಿ.ಎ., ತೃತೀಯ ಸ್ಥಾನವನ್ನು ಶ್ರೀದೇವಿ ದಿನೇಶ್ ಗಳಿಸಿದರು.
ಕಿಗ್ಗಾಲು ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಡಿಕೇರಿ ತಾಲೂಕಿನ ಅಭಸಾಪದ ಅಧ್ಯಕ್ಷ ಬಾರಿಯಂಡ ಜೋಯಪ್ಪ, ವೀರಾಜಪೇಟೆ ತಾಲೂಕಿನ ಅಧ್ಯಕ್ಷೆ ಉಷಾ ಪ್ರೀತಮ್ ಹಾಜರಿದ್ದರು. ಶೋಭಾ ಸುಬ್ಬಯ್ಯ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಬಬ್ಬೀರ ಸರಸ್ವತಿ ಸ್ವಾಗತಿಸಿದರು. ಕೋರನ ಸುನೀಲ್ ವಂದಿಸಿದರು.