ಮಡಿಕೇರಿ, ಫೆ. 13: ಕೊಡವಾಮೆರ ಕೊಂಡಾಟ ಸಂಸ್ಥೆಯು ಹೊರತರುತ್ತಿರುವ, 19 ಪುಸ್ತಕಮಾಲೆ ಯೋಜನೆಯ 19 ಪುಸ್ತಕಗಳು ತಾ. 23 ರಂದು ಬೆಂಗಳೂರು ಕೊಡವ ಸಮಾಜದ ಸಾಹಿತ್ಯ ದಿನದಂದು ಬಿಡುಗಡೆ ಯಾಗಲಿದೆ ಎಂದು ಕೊಡವಾಮೆರ ಕೊಂಡಾಟ ಸಂಸ್ಥೆಯ ಅಧ್ಯಕ್ಷ, ಚಾಮೆರ ದಿನೇಶ್‍ಬೆಳ್ಯಪ್ಪ ಅವರು ತಿಳಿಸಿದ್ದಾರೆ.

ಬೆಂಗಳೂರು ಕೊಡವ ಸಮಾಜವು ಸಾಹಿತ್ಯಕ್ಕೆ ಮೀಸಲÁಗಿರುವ ಹಾಗೂ ಪ್ರೋತ್ಸಾಹಿಸುವ ಸಾಹಿತ್ಯ ದಿನ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸುತಿದ್ದು, ಈ ಕಾರ್ಯಕ್ರಮದಲ್ಲಿ ಕೊಡವಾಮೆರ ಕೊಂಡಾಟ ಕೂಟದ ಸದಸ್ಯರು ಬರೆದಿರುವ 19 ವಿಷಯಾಧಾರಿತ 19 ಬರಗಾರರು ಬರೆದಿರುವ 19 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಕೂಟವು 2019ನೇ ಇಸವಿಯಲ್ಲಿ ಪ್ರಾರಂಭವಾದ ನೆನಪಿಗಾಗಿ ಹಾಗೂ ಹೊಸ ಸಾಹಿತಿಗಳನ್ನು ಪರಿಚಯಿಸಿ ಕೊಡವ ಸಾಹಿತ್ಯದ ಪುನಶ್ಚೇತನಕ್ಕೆ ಒತ್ತು ನೀಡುವ ಉದ್ದೇಶದಿಂದ ಈ 19 ಪುಸ್ತಕ ಮಾಲೆÉ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ದಿನೇಶ್‍ಬೆಳ್ಯಪ್ಪ ಮಾಹಿತಿ ನೀಡಿದ್ದಾರೆ.

ನಾಲ್ಕು ತಿಂಗಳ ಹಿಂದೆ ಪ್ರಾರಂಭವಾಗಿರುವ ಕೊಡವಾಮೆರ ಕೊಂಡಾಟ ಸಂಸ್ಥೆಯ, ಈ 19 ಪುಸ್ತಕ ಮಾಲೆÉ ಯೋಜನೆಯಲ್ಲಿ, ಐವರನ್ನು ಹೊರತು ಪಡಿಸಿದರೆ ಉಳಿದ 14 ಮಂದಿ ಬರಹಗಾರು ಇದೇ ಮೊದಲ ಬಾರಿಗೆ ಪುಸ್ತಕ ಬರೆಯುವವರಾಗಿ ದ್ದಾರೆ. ಒಟ್ಟು 14 ಹೊಸ ಸಾಹಿತಿಗಳನ್ನು ಏಕ ಕಾಲದಲ್ಲಿ, ಸಾಹಿತ್ಯ ಲÉೂೀಕಕ್ಕೆ ಪರಿಚಯಿಸಿದ ಕೀರ್ತಿ ಕೊಡವಾಮೆರ ಕೊಂಡಾಟ ಸಂಸ್ಥೆಗೆ ಸಲ್ಲಲಿದೆ. ಅಲ್ಲದೆ ಕೊಡವ ಸಾಹಿತ್ಯ ಇತಿಹಾಸದಲ್ಲಿಯೇ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಅತಿ ಹೆಚ್ಚು ಪುಸ್ತಕಗಳು ಎನ್ನುವ ಹೆಗ್ಗಳಿಕೆಯೂ ಈ ಯೋಜನೆಗೆ ಸೇರಲಿದೆ. 19 ಪುಸ್ತಕಗಳೂ ಕೂಡ ಕೊಡವ ಇತಿಹಾಸ, ಕ್ರೀಡೆ, ಸಾಮಾನ್ಯ ಜ್ಞಾನ, ಆಯುಧ, ಕಾದಂಬರಿ, ವಸ್ತು ವಿಶೇಷತೆ, ಬೈಗುಳ, ಗಾದೆ, ಒಗಟು, ಕವನ, ಕಥೆ, ವೈಚಾರಿಕತೆ, ಹಾಸ್ಯ, ಹನಿಗವನ, ಸಂಬಂಧಗಳು, ಸಾಧಕರ ಮಾಹಿತಿ, ಅಡುಗೆ, ಸೇರಿದಂತೆ 19 ವಿಭಿನ್ನ ವಿಷಯಾಧಾರಿತ, ಪುಸ್ತಕಗಳಾಗಿದ್ದು, ಜನಾಂಗದ ಯುವ ಪೀಳಿಗೆಗೆ ಉತ್ತಮ ಸಂದೇಶಾತ್ಕಕ ಮಾಹಿತಿಯನ್ನು ನೀಡುವಂತಹ ಪುಸ್ತಕಗಳಾಗಲಿವೆ. ತಾ. 23 ರಂದು ಬೆಂಗಳೂರು ಕೊಡವ ಸಮಾಜದಲ್ಲಿ ನಡೆಯುವ ಈ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಕೊಡವ ಸಮಾಜದ ಆಧ್ಯಕ್ಷ ಮುಕ್ಕಾಟಿರ ನಾಣಯ್ಯ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ, ಬ್ರಹ್ಮಗಿರಿ ಸಂಪಾದಕ, ಉಳ್ಳಿಯಡ ಪೂವಯ್ಯ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಪೂಮಾಲೆÉ ಸಂಪಾದಕ ಅಜ್ಜಿನಿಕಂಡ ಮಹೇಶ್‍ನಾಚಯ್ಯ, ಬೆಂಗಳೂರು ಕೊಡವ ಸಮಾಜ ಗೌರವ ಕಾರ್ಯದರ್ಶಿ ಚೆರಿಯಪಂಡ ಸುರೇಶ್ ನಂಜಪ್ಪ, ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್‍ಬೆಳ್ಯಪ್ಪ, ಅವರುಗಳು ಉಪಸ್ಥಿತರಿರುವರು.

ಇದೇ ಸಂದÀರ್ಭದಲ್ಲಿ ಹಿರಿಯ ಕೊಡವ ಸಾಹಿತಿಗಳನ್ನು ಬೆಂಗಳೂರು ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಗುವುದು. ಕಾರ್ಯಕ್ರಮ ದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.