ಮಡಿಕೇರಿ, ಫೆ. 13: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯದ ಬಗ್ಗೆ ಸಂಶೋಧನೆ ಮಾಡಲು ಪ್ರೋತ್ಸಾಹಿಸುವುದು ಆದ್ಯ ಕರ್ತವ್ಯ ಎಂದು ಮಂಗಳೂರು ವಿ.ವಿ.ಯ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ‘ನ್ಯಾಶನಲ್ ನೋವೆಲ್ ಅಪೆÇ್ರೀಚಸ್ ಇನ್ ಕೆಮಿಕಲ್ ಸೈನ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಜ್ಞಾನವನ್ನು ನೀಡುತ್ತದೆ. ಸೃಜನಶೀಲತೆ ಕಲ್ಪನೆಯಿಲ್ಲದೆ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಂಶೋಧಕರು ಜನರ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರುವಂತಹ ಸಂಶೋಧನೆಗಳನ್ನು ಮಾಡಬೇಕು. ರಸಾಯನ ಶಾಸ್ತ್ರದ ಮೂಲಕ ದೇಶವನ್ನು ಅಭಿವೃದ್ಧಿಯಾಗಿಸೋಣ ಎಂದು ಅವರು ಹೇಳಿದರು.
ಮಂಗಳೂರು ವಿವಿಯ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಜಿ.ಕೆ. ನಾಗರಾಜ್ ‘ನ್ಯಾಶನಲ್ ನೋವೆಲ್ ಅಪೆÇ್ರೀಚಸ್ ಇನ್ ಕೆಮಿಕಲ್ ಸೈನ್ಸ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ರಾಸಾಯನಿಕ ವಿಜ್ಞಾನವು ವಿಶ್ವದ ಅನೇಕ ದೊಡ್ಡ ಸವಾಲುಗಳನ್ನು ಪರಿಹರಿಸಲು ಸಾಮಥ್ರ್ಯವನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದರು.
ರಾಸಾಯನಿಕ ವಿಜ್ಞಾನವು ಹೆಚ್ಚಳವಾಗಿ ಹವಾಮಾನ ಬದಲಾವಣೆ, ಆಹಾರ ಉತ್ಪಾದನೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುತ್ತದೆ. ಈ ವಿಚಾರ ಸಂಕಿರಣವು ಹೊಸ ಆವಿಷ್ಕಾರಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ ಎಂದು ಹೇಳಿದರು.
ಶಿವಾಜಿ ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರೊ. ಅನಿಲ್ ವಿಥಲ್ ಗುಳೆ, ಕುವೆಂಪು ವಿವಿಯ ಕೈಗಾರಿಕಾ ರಸಾಯನಶಾಸ್ತ್ರದ ಅಧ್ಯಕ್ಷ ಪ್ರೊ. ಬಿ.ಇ. ಕುಮಾರಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ, ರಸಾಯನ ಶಾಸ್ತ್ರದ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್, ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಸ್ವಾಗತಿಸಿ, ಗಣಕಯಂತ್ರ ವಿಜ್ಞಾನದ ಪ್ರಾಧ್ಯಾಪಕ ರವಿಶಂಕರ್ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಎಂ. ಅಮೃತ ನಿರೂಪಿಸಿದರು.