ಶನಿವಾರಸಂತೆ, ಫೆ. 13: ಜಿಲ್ಲಾ ಅರ್.ಸಿ.ಹೆಚ್. ಅಧಿಕಾರಿ ಡಾ. ಗೋಪಿನಾಥ್ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಕೆಂದ್ರದಲ್ಲಿ ಖಾಯಂ ವ್ಯೆದ್ಯರಿಲ್ಲದ ಬಗ್ಗೆ ಮತ್ತು 108 ಆ್ಯಂಬ್ಯುಲೆನ್ಸ್ ಬೇರೆ ಕಡೆ ವರ್ಗಾಯಿಸಿರುವ ವಿಷಯವನ್ನು ಪ್ರಸ್ತಾಪಿಸಿ ಸಂಘ ಸಂಸ್ಥೆಗಳ ವತಿಯಿಂದ ಪ್ರತಿಭಟಿಸುವ ಎಚ್ಚರಿಕೆ ನೀಡಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಡಾ. ಗೋಪಿನಾಥ್ ಅವರು ಹೊಸ ವ್ಯೆದ್ಯರುಗಳ ನೇಮಕಾತಿಯಾಗದಿರುವ ಮತ್ತು ಗುತ್ತಿಗೆ ಆಧಾರದಲ್ಲೂ ಸಹ ವ್ಯೆದ್ಯರುಗಳು ಬರಲು ಆಸಕ್ತಿ ತೋರದಿರುವ ಬಗ್ಗೆ ವಿವರಿಸಿ ಆದಷ್ಟ್ಟು ಬೇಗ ವ್ಯೆದ್ಯರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ವ್ಯೆದ್ಯರ ನೇಮಕಾತಿಗಾಗಿ ರಾಜ್ಯದ ಎಲ್ಲಾ ಪತ್ರಿಕೆಗಳಲ್ಲೂ ಜಾಹಿರಾತು ನೀಡಿದ್ದರೂ ಯಾರೂ ಕೂಡ ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಹಲವು ವರ್ಷಗಳಿಂದ ಕೊಡ್ಲಿಪೇಟೆಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದ 108 ಆ್ಯಂಬ್ಯುಲೆನ್ಸ್ನ್ನು ರಾಜಕೀಯ ಪಿತೂರಿಯಿಂದ ಬೇರೆ ಕಡೆ ವರ್ಗಾಯಿಸಿರುವುದಕ್ಕೆ ತರಾಟೆಗೆ ತೆಗೆದುಕೊಳ್ಳಲಾಯಿತು.
ತಾಳ್ಮೆಯಿಂದಲೇ ಉತ್ತರಿಸಿದ ಡಾ. ಗೋಪಿನಾಥ್ ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸುವುದಾಗಿಯೂ ಮೇಲಾಧಿಕಾರಿ ಗಳ ಗಮನಕ್ಕೆ ತಂದು ಶಾಶ್ವತವಾಗಿ ಇಲ್ಲಿ ಉಳಿಸಿಕೊಡುವುದಾಗಿ ಭರವಸೆ ನೀಡಿದರು.ಕೊಡ್ಲಿಪೇಟೆ ಆರೋಗ್ಯ ಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು ಸಮುದಾಯ ಆರೋಗ್ಯ ಕೇಂದ್ರ ಮಾಡುವಂತೆ ಒತ್ತಾಯಿಸಲಾಯಿತು.
ಖಾಯಂ ವ್ಯೆದ್ಯಾಧಿಕಾರಿಗಳ ನೇಮಕ ಮಾಡುವಂತೆ ತಾಲೂಕು ಪಂಚಾಯತಿ ಅಧ್ಯಕ್ಷೆ ಪುಷ್ಪ ರಾಜೇಶ್ ಮನವಿ ಸಲ್ಲಿಸಿದರು.
ವಾಣಿಜ್ಯೋದ್ಯಮಿಗಳ ಸಂಘದ ಜಿಲ್ಲಾ ನಿರ್ದೇಶಕ ಸುಬ್ರಮಣ್ಯ, ಹೋರಾಟಗಾರ ಸೋಮಣ್ಣ, ಕರವೇ ಅಧ್ಯಕ್ಷ ಭೂಪಾಲ್, ಹ್ಯಾಂಡ್ ಪೋಸ್ಟ್ ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಹನೀಫ್, ಸಮಾಜ ಸೇವಕ ರಾಜೇಶ್, ಜಯಕರ್ನಾಟಕ ಅಧ್ಯಕ್ಷ ಶೋಭಿತ್, ವ್ಯೆದ್ಯಾಧಿಕಾರಿ ಡಾ. ಚೇತನ್, ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಸಿಬ್ಬಂದಿ ನವೀನ್ ಹಾಜರಿದ್ದರು.