ಶ್ರೀಮಂಗಲ: ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಶ್ರೀಮಂಗಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶ್ರೀಮಂಗಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಾದೇವಸ್ವಾಮಿ, ಶ್ರೀಮಂಗಲ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾರದ, ಆರೋಗ್ಯ ಪರಿವೀಕ್ಷಕ ಕೆಂಪರಾಜ್, ಆರ್. ರಾಣಿ ಮತ್ತು ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ : ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ದೇವಿಪ್ರಸಾದ್ ಕಾಯರ್ ಮಾರ್ ಮಕ್ಕಳಿಗೆ ಜಂತುಹುಳು ಗುಳಿಗೆಯನ್ನು ವಿತರಿಸಿದರು.
ಹೊರೂರು ಅಂಗನವಾಡಿ ಕೇಂದ್ರದಲ್ಲಿ ದೇವಿಪ್ರಸಾದ್ ಜಂತುಹುಳು ಗುಳಿಗೆಯನ್ನು ವಿತರಿಸಿ ಮಾತನಾಡಿದರು. ಈ ಸಂದರ್ಭ ಅಂಗನವಾಡಿ ಶಿಕ್ಷಕಿ ನಳಿನಿ ಶಿವಣ್ಣ, ಆಶಾ ಕಾರ್ಯಕರ್ತೆ ಸುಮಿತ್ರ ಹಾಗೂ ಪೋಷಕರು ಹಾಜರಿದ್ದರು.