ಮಡಿಕೇರಿ, ಫೆ. 12: ಸುಂಟಿಕೊಪ್ಪ ಬಳಿಯ ಡಿ ಪನ್ಯ ತೋಟದ ಪನ್ಯ ಎಫ್.ಸಿ. ಸಂಸ್ಥೆಯು ಕೆಡ್ಡಸ ಹಬ್ಬದ ಪ್ರಯುಕ್ತ ಆಯೋಜಿಸಿದ್ದ 7ನೇ ವರ್ಷದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀನಿ ಫ್ರೆಂಡ್ಸ್ ತಂಡವು ತೇಜ್ ಫ್ರೆಂಡ್ಸ್ ತಂಡವನ್ನು ಮಣಿಸಿ ವಿಜಯಮಾಲೆಯನ್ನು ಮುಡಿಗೇರಿಸಿಕೊಂಡಿದೆ.
ವಿಜೇತ ತಂಡದ ಆಟಗಾರರಾದ ಶ್ರೀನಿವಾಸ್, ಮಂಜು, ಚಿದಾನಂದ, ಶಶಿ, ನವೀನ, ಪ್ರಸಾದ್, ಸತೀಶ್ ಇವರುಗಳು ಮಿಂಚಿನ ಆಟ ಪ್ರದರ್ಶಿಸಿದರು. ಪ್ರಥಮ ಬಹುಮಾನದ ಟ್ರೋಫಿ ಪ್ರಾಯೋಜಕರಾದ ರಮೇಶ್ ಮತ್ತು ತೇಜಸ್ ಹಾಗೂ ದ್ವಿತೀಯ ಬಹುಮಾನ ಪ್ರಾಯೋಜಕರಾದ ಪ್ರಸಾದ್ ಮತ್ತು ಅರುಣ್ ಬಹುಮಾನ ವಿತರಿಸಿದರು.