ಕುಶಾಲನಗರ, ಫೆ. 12: ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗಣಿತದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಅಕ್ಷರ ಫೌಂಡೇಶನ್ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ ಎಂದು ರಾಜ್ಯ ಸಂಯೋಜಕರು ಮತ್ತು ಜಿಲ್ಲಾ ವ್ಯವಸ್ಥಾಪಕ ಹನುಂತರಾವ್ ಬೀಮರಾವ್ ಕಣಿ ಅವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನ ಗ್ರಾಮ ಪಂಚಾಯಿತಿ ಹೆಬ್ಬಾಲೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಥಮ ಬಾರಿ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಗಣಿತಾ ಕಲಿಕಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಪಿಡಿಓ ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯ್, ಪಂಚಾಯಿತಿ ದ್ವಿತೀಯ ದರ್ಜೆಯ ಲೆಕ್ಕಾಧಿಕಾರಿ ಮಮತಾ, ಗಣಿತಾ ಕಲಿಕಾ ಆಂದೋಲನದ ತಾಲೂಕು ಸಂಚಾಲಕ ಗೋವಿಂದರಾಜು, ಬಿಆರ್‍ಪಿ ಲೋಕೇಶ, ವಿಜಯಕುಮಾರ್ ಮತ್ತು ಸಿ.ಅರ್.ಪಿ.ಗಳಾದ ಅಶೋಕ, ಮುಬೀನಾ, ಸತ್ಯನಾರಾಯಣ, ಸಂತೋಷ್ ಕುಮಾರ್, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ವಹಿಸಿದ್ದರು.

ಹೆಬ್ಬಾಲೆ ಸಿ.ಆರ್.ಪಿ. ಗಿರೀಶ್ ಸ್ವಾಗತಿಸಿದರು. 7ನೇ ತರಗತಿಯ ಮಕ್ಕಳು ಪ್ರಾರ್ಥಿಸಿ, ಶಿಕ್ಷಕಿ ಬಬಿತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಪುಷ್ಪಾವತಿ ವಂದಿಸಿದರು. ಫಲಿತಾಂಶದ ವಿವರ 4ನೇ ತರಗತಿಯಲ್ಲಿ ಪ್ರಥಮ ದರ್ಮಿತಾ ಹುಲಸೆ, 5ನೇ ತರಗತಿ ಜೀವನ್ ಹೆಬ್ಬಾಲೆ ಮತ್ತು 6ನೇ ತರಗತಿ ನಮಿತಾ ಹೆಬ್ಬಾಲೆ. ಕಾರ್ಯಕ್ರಮದಲ್ಲಿ ಹೆಬ್ಬಾಲೆ, ಹುಲಸೆ, ಕಣಿವೆ ಮತ್ತು ಹಳೆಗೋಟೆ ಶಾಲೆಯ 119 ಮಕ್ಕಳು ಭಾಗವಹಿಸಿದ್ದರು. ಗೆದ್ದ ಮಕ್ಕಳಿಗೆ ಪ್ರಥಮ ಬಹುಮಾನ ರೂ. 1000, ದ್ವಿತೀಯ ಬಹುಮಾನ ರೂ. 600 ಮತ್ತು ತೃತೀಯ ಬಹುಮಾನ ರೂ. 400 ವಿತರಿಸಲಾಯಿತು.

ಅಪರಾಹ್ನ ಶಾಲಾ ಮಕ್ಕಳಿಗೆ ಶಿಕ್ಷಕರಾದ ರಮೇಶ್ ಅವರು ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಶಾಲಾ ಶಿಕ್ಷಕಿ ಜಾನಕಿ ಮತ್ತು ನೀಲಾಂಬಿಕಾ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ವಹಿಸಿದ್ದರು.