ಮಡಿಕೇರಿ, ಫೆ.12 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದ್ವಿತೀಯ ಅರೆಭಾಷೆ ಸಾಹಿತ್ಯ ಸಮ್ಮೇಳನ ಹೊದ್ದೇಟಿ ಭವಾನಿಶಂಕರ್ ಅವರ ಅಧ್ಯಕ್ಷತೆಯಲ್ಲಿ ತಾ.23 ರಂದು ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರದ ಸಂಗಯ್ಯನಪುರದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು, ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಸಹಯೋಗದಲ್ಲಿ ನಡೆಯಲಿರುವ ಸಮ್ಮೇಳನದ ಅಂಗವಾಗಿ ಅಂದು ಬೆಳಗ್ಗೆ 9.30ಕ್ಕೆ ನಡೆಯಲಿರುವ ಮೆರವಣಿಗೆಯನ್ನು ತಾಲೂಕು ಪಂಚಾಯತ್ ನಿವೃತ್ತ ವಿಸ್ತರಣಾಧಿಕಾರಿ ಕೆದಂಬಾಡಿ ಈರಪ್ಪ, ದ್ವಾರವನ್ನು ಅರಕಲಗೋಡು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹುಲಿಮನೆ ಮಾದಪ್ಪ ಉದ್ಘಾಟಿಸಲಿದ್ದಾರೆ. ರಾಷ್ಟ್ರ ಧ್ವಜಾರೋಹಣವನ್ನು ಗಣಗೂರು ಗ್ರಾ.ಪಂ.ಅಧ್ಯಕ್ಷೆ ಸವಿತಾ ಸುಕುಮಾರ್, ಸಮ್ಮೇಳನದ ಧ್ವಜವನ್ನು ಅಲೂರುಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ವೀಣಾ ರಮೇಶ್ ಆರೋಹಣ ಮಾಡಲಿದ್ದಾರೆ ಎಂದರು.ಬಳಿಕ ವಸ್ತು ಪ್ರದರ್ಶನವನ್ನು ಅಬ್ಬೂರುಕಟ್ಟೆ ಕ್ಷೇತ್ರದ ತಾ.ಪಂ. ಸದಸ್ಯೆ ಬಟ್ಯನ ಸವಿತಾ ಈರಪ್ಪ ಹಾಗೂ ಪುಸ್ತಕ ಪ್ರದರ್ಶನವನ್ನು ಗೋಪಾಲಪುರ ಕ್ಷೇತ್ರದ ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್ ಅವರು ಉದ್ಘಾಟಿಸಲಿದ್ದಾರೆ ಎಂದರು.ಸಮ್ಮೇಳನವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದು, ರಾಜ್ಯ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪುಸ್ತಕ ಲೋಕಾರ್ಪಣೆ: ಇದೇ ಸಂದರ್ಭ ಅಕಾಡೆಮಿ ವತಿಯಿಂದ ಪ್ರಕಟಿಸಲಾದ ಅರೆಭಾಷೆ ಕಾದಂಬರಿ ಗಳಾದ ‘ಪುಂಸ್ತ್ರೀ’, ‘ಕಲ್ಯಾಣಸ್ವಾಮಿ’ ಮತ್ತು ಕಥಾಸಂಕಲನ ‘ಅಪೂರ್ವ ಸಂಗಮ’ವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಲೋಕಾರ್ಪಣೆ ಮಾಡಲಿದ್ದು, ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸೋ.ಪೇಟೆ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಭಾಗವಹಿಸಲಿದ್ದು, ನಿಕಟಪೂರ್ವ ಸಮ್ಮೇಳಾನಧ್ಯಕ್ಷ ಕೆ.ಆರ್.ಗಂಗಾಧರ ಅವರು ಸಮ್ಮೇಳನದ ಬಗ್ಗೆ ಮಾತ ನಾಡಲಿದ್ದಾರೆ. ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಸರೋಜಮ್ಮ, ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಕೊಲ್ಯದ ಗಿರೀಶ್, ಪಿ.ಸಿ.ಜಯರಾಂ ಭಾಗವಹಿಸಲಿದ್ದಾರೆ ಎಂದು ನುಡಿದರು.

(ಮೊದಲ ಪುಟದಿಂದ)

ಅರೆಭಾಷೆ ಸಾಹಿತ್ಯ ವಿಚಾರಗೋಷ್ಠಿ : ಮಧ್ಯಾಹ್ನ 12ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ವಿಶ್ವನಾಥ ಬದಿಕಾನ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅರೆಭಾಷೆ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಅರೆಭಾಷೆ ಮತ್ತು ಸಂಸ್ಕøತಿ ಅಂದು-ಇಂದು-ಮುಂದೆ ಹಾಗೂ ಸುಳ್ಯದ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಐ.ಸಿ.ಡಿ.ಎಸ್ ಮೇಲ್ವಿಚಾರಕಿ ಶೈಲಜಾ ದಿನೇಶ್ ಅವರು ‘ಅರೆಭಾಷೆ ಮತ್ತು ಮಕ್ಕಳ ಸಂಸ್ಕÀೃತಿ ಪ್ರಸರಣದಲ್ಲಿ ಅವ್ವ’ ಎಂಬ ವಿಷಯದ ಕುರಿತು ವಿಚಾರಮಂಡನೆ ಮಾಡಲಿದ್ದಾರೆ ಎಂದರು.

ಕವಿಗೋಷ್ಠಿ

ಅಪರಾಹ್ನ 1ಗಂಟೆಗೆ ಊರುಬೈಲು ಲೋಕೇಶ್ ಮತ್ತು ತಂಡದವರಿಂದ ‘ಸಿರಿ ಸುಗ್ಗಿ’ ಜನಪದ ಶೈಲಿಯ ಅರೆಭಾಷೆ ಹಾಡುಗಳ ಗಾಯನ ನಡೆಯಲಿದ್ದು, 2ಗಂಟೆಗೆ ಬಾರಿಯಂಡ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅರೆಭಾಷೆ ಕವಿಗೋಷ್ಠಿಯಲ್ಲಿ ಕವಿಗಳಾದ ಎಡಿಕೇರಿ ವಿಶ್ವನಾಥ, ವಿನೋದ್ ಮೂಡಗದ್ದೆ, ಲೀಲಾ ದಾಮೋದರ, ಕೃಪಾ ದೇವರಾಜ್ ಪೂಜಾರಿರ, ಸಂಜೀವ ಕುದ್ಪಾಜೆ ಮತ್ತು ಹರ್ಷಿತಾ ಪೇರಿಯನ ಕವನಗಳನ್ನು ವಾಚಿಸಲಿದ್ದಾರೆ ಎಂದು ತಿಳಿಸಿದರು.

ಸಮಾರೋಪ-ಸನ್ಮಾನ: ಅಪರಾಹ್ನ ಗಂಟೆ 3ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆವಹಿಸಲಿದ್ದು, ಮೈಸೂರಿನ ವಿಶ್ರಾಂತ ಕುಲಪತಿ ಡಾ. ಕೊಳಂಬೆ ಚಿದಾನಂದ ಗೌಡ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೊಸೂರು ಶಿವಪ್ರಕಾಶ್(ಸಮಾಜ ಸೇವೆ) ಅತ್ಯಾಡಿ.ಎಂ.ಪೂವಯ್ಯ (ಸಂಸ್ಕøತಿ) ಅಜಿರಂಗಲ ರಾಮಣ್ಣ (ಕೃಷಿ) ನವನೀತ ಪಟ್ಟೆಮನೆ (ಕ್ರೀಡೆ), ಪಿ.ಜಿ.ಅಂಬೆಕಲ್ (ಸಾಹಿತ್ಯ) ಹರಿಪ್ರಸಾದ್ ಅಡ್ಪಂಗಾಯ (ಪತ್ರಿಕೋದ್ಯಮ), ನಿಂಗರಾಜು ನಂಗಾರು (ಶಿಕ್ಷಣ) ಅಮ್ಮಾಜೀರ ಹರ್ಷಿತ್ (ಯುವ ಸಾಧಕ) ಅವನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಂಜೆ 5ಕ್ಕೆ ಪೊನಿಧ್ವನಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಾವೇರಿ ನಾಡ್ ಕಲಾವಿದರಿಂದ ‘ನಾಡ್‍ನ ಸಂಸ್ಕÀೃತಿ ಹಿರಿಮೆ’ ನಾಟ್ಯ ರೂಪಕ, ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದವರಿಂದ ಅರೆಭಾಷೆ ಸಾಂಸ್ಕøತಿಕ ವೈವಿಧ್ಯ ನಡೆಯಲಿದೆ ಎಂದು ತಿಳಿಸಿದರು.

ಪುಸ್ತಕ ಮಾರಾಟಕ್ಕೆ ಮಳಿಗೆಗಳು ಲಭ್ಯವಿದ್ದು, ಮಾರಾಟ ಮಾಡಲು ಇಚ್ಚಿಸುವವರು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ದೂ: 08272-223055. ಅಥವಾ ಅಕಾಡೆಮಿ ಸದಸ್ಯ ಧನಂಜಯ ಅಗೋಳಿಕಜೆ ಮೊ. ನಂ. 9449731238 ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಆಲೂರು ಸಿದ್ದಾಪುರ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಬಿ.ಗಿರೀಶ್, ಪ್ರಧಾನ ಕಾರ್ಯದರ್ಶಿ ಕುಯ್ಯಮುಡಿ ವಿ.ಜಯಕುಮಾರ್ ಹಾಗೂ ಸದಸ್ಯ ಚೀಯಂಡಿ ದೇವಯ್ಯ ಉಪಸ್ಥಿತರಿದ್ದರು.