ಗೋಣಿಕೊಪ್ಪ ವರದಿ, ಫೆ. 12 ; ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ಮಿನಿ ಒಲಿಂಪಿಕ್ ಹಾಕಿಯ 14 ಒಳಗಿನ ವರ್ಷದೊಳಗಿನ ವಿಭಾಗದ ಬಾಲಕ, ಬಾಲಕಿಯರ ವಿಭಾಗದಲ್ಲಿ ಹಾಕಿಕೂರ್ಗ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿವೆ.ಬಾಲಕರ ತಂಡವು ಬೆಳಗಾಂ ವಿರುದ್ಧ 16-0, ಕಲಬುರ್ಗಿ ವಿರುದ್ಧ 11-1, ಧಾರವಾಡ ವಿರುದ್ಧ 8-0 ಗೋಲುಗಳಿಂದ ಜಯಿಸಿತು. ಸೆಮಿಫೈನಲ್‍ನಲ್ಲಿ ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ವಿರುದ್ಧ 3-2 ಗೋಲುಗಳಿಂದ ಜಯಿಸಿತು. ಅಂತಿಮ ಹಣಾಹಣಿಯಲ್ಲಿ ಬಳ್ಳಾರಿ ವಿರುದ್ಧ 6-3 ಗೋಲುಗಳಿಂದ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ಬಾಲಕಿಯರ ತಂಡವು ಬೆಂಗಳೂರು ವಿರುದ್ಧ 9-0, ಮೈಸೂರು ವಿರುದ್ಧ 10-0, ಸೆಮಿಫೈನಲ್‍ನಲ್ಲಿ ದಾರವಾಡ ವಿರುದ್ಧ 3-1, ಅಂತಿಮ ಪಂದ್ಯದಲ್ಲಿ ಹಾಸನ ವಿರುದ್ಧ 3-1 ಗೋಲುಗಳಿಂದ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬಾಲಕಿಯರ ತಂಡದಲ್ಲಿ ಪೊನ್ನಂಪೇಟೆ, ಕೂಡಿಗೆ, ಮಡಿಕೇರಿ ಸ್ಪೋಟ್ರ್ಸ್ ಹಾಸ್ಟೆಲ್, ಗೋಣಿಕೊಪ್ಪ ಲಯನ್ಸ್ ಶಾಲೆ, ಹಾಗೂ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ತಂಡದ ಆಟಗಾರರು ಹಾಕಿಕೂರ್ಗ್ ತಂಡದಲ್ಲಿ ಪಾಲ್ಗೊಂಡಿದ್ದರು.