ವೀರಾಜಪೇಟೆ ಫೆ. 12: ವೀರಾಜಪೇಟೆ ಕಾವೇರಿ ಪದವಿ, ಪದವಿಪೂರ್ವ ಕಾಲೇಜು ಹೆಚ್ ಎಸ್ ಆರ್ ಲೇಔಟ್ ಕೊಡವ ಒಕ್ಕ, ಬೆಂಗಳೂರು, ಕರ್ತುರ ಮುದ್ದಪ್ಪ ಕುಟುಂಬ ಇವರ ಸಹಯೋಗದಲ್ಲಿ ತಾ. 15 ಮತ್ತು 16ರಂದು ಕಾವೇರಿ ಕಾಲೇಜು ಮ್ಯೆದಾನದಲ್ಲಿ ದಕ್ಷಿಣ ವಲಯ ಅಂತರ ಕಾಲೇಜು ಆಹ್ವಾನಿತ ಏಳು ಆಟಗಾರರ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಇಟ್ಟಿರ ಕಮಾಲಾಕ್ಷಿ ಬಿದ್ದಪ್ಪ ಹೇಳಿದರು.
ದ್ಯೆಹಿಕ ಶಿಕ್ಷಣ ನಿರ್ದೇಶಕಿ ಡಾ: ದೇಚಮ್ಮ ಮಾತನಾಡಿ ಈ ಪಂದ್ಯಾಟದಲ್ಲಿ ಪದವಿ, ಪದವಿಪೂರ್ವ, ವೃತ್ತಿ ಶಿಕ್ಷಣ, ಸ್ನಾತಕೋತ್ತರ ಪದವಿ ಕಾಲೇಜುಗಳು ಭಾಗವಹಿಸಬಹುದಾಗಿದೆ. ಕರ್ನಾಟಕದ ಹಲವು ಕಾಲೇೀಜುಗಳು ಸೇರಿದಂತೆ ತಮಿಳುನಾಡಿನ ನೇವಲ್ ಅಕಾಡೆಮಿ, ಕೇರಳದ ಕಣ್ಣನೂರು ಹಾಕಿ ಅಸೋಸಿಯೇಷನ್, ಚೆನೈನ ಡಿ.ಬಿ. ಜೈನ್ ಕಾಲೇಜುಗಳು ಭಾಗವಹಿಸುತ್ತಿವೆ. ಈಗಾಗಲೇ 30 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆÉ ಎಂದರು.
ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚೆರಿಯಪಂಡ ಕೆ.ಉತ್ತಪ್ಪ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಂಸ್ಥೆಯ ಕಾರ್ಯÀದರ್ಶಿ ಪ್ರೊ. ಇಟ್ಟಿರ ಬಿದ್ದಪ್ಪ, ರಾಜ್ಯ ಮೀಡಿಯಾ ಅಕಾಡಮಿ ಮಾಜಿ ಅಧ್ಯಕ್ಷ ಮನಿಯಪಂಡ ಪೊನ್ನಪ್ಪ, ವಕೀಲ ಮುಕ್ಕಾಟ್ಟಿರ ಅಯ್ಯಪ್ಪ, ನಿವೃತ್ತ ಸೇನಾಧಿಕಾರಿ ಲೆ,ಕ ಕೊಂಗಂಡ ಮಾಚಯ್ಯ, ಸಂಸ್ಥೆಯ ನಿರ್ದೇಶಕ ಕುಲ್ಲಚಂಡ ಬೋಪಣ್ಣ, ಪುಚ್ಚಿಮಂಡ ಸುಭಾಶ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಎಂ ನಾಣಯ್ಯ ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಪದ್ಮಶ್ರಿ ಪ್ರಶಸ್ತಿ ಪುರಸ್ಕøತ ಮೊಳ್ಳೆರ ಪಿ ಗಣೇಶ್, ಎಚ್ಎಸ್ಆರ್ ಕೊಡವ ಒಕ್ಕಡ ಅಧ್ಯಕ್ಷ ಮಾಪಂಗಡ ಬೆಳ್ಳಿಯಪ್ಪ, ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಬುಟ್ಟಿಯಂಡ ಚಂಗಪ್ಪ, ಲೋಕೇಶ್, ನಾತನ್, ರವಿಗೌಡ, ವಿನ್ಸೆಂಟ್ರಾಜ್, ಕೂತಂಡ ಪೂಣಚ್ಚ ಅತಿಥಿಗಳಾಗಿ ಉಪಸ್ಥಿತಲಿರುವರು ಎಂದು ಹೇಳಿದರು.
ಗೋಷ್ಠಿಯಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಎಂ ನಾಚಪ್ಪ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅನ್ನಡಿಯಂಡ ಪೊನ್ನಣ್ಣ, ಕಾರ್ಯದರ್ಶಿ ತಿರ್ಟೆರ ಗೌತಮ್, ಕ್ರೀಡಾಕೂಟ ಸಂಚಾಲಕ ಚಿಮ್ಮಣಮಾಡ ಸೋಮಣ್ಣ, ಸಹ ಸಂಚಾಲಕ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಉಪಸ್ಥಿತರಿದ್ದರು.