ಮಡಿಕೇರಿ, ಫೆ. 12: ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಮಡಿಕೇರಿ ತಾಲೂಕು ಸಾಮಾನ್ಯ 3 ಸ್ಥಾನಕ್ಕೆ ಟಿ.ಹೆಚ್. ಉದಯಕುಮಾರ್, ಕೊಂಗಾಂಡ ಎ. ತಿಮ್ಮಯ್ಯ, ಕೆ.ಜಿ. ಪೀಟರ್ ಆಯ್ಕೆಯಾಗಿದ್ದಾರೆ. ಮಹಿಳಾ ಸ್ಥಾನಕ್ಕೆ ಬೇಬಿ ಪೂವಯ್ಯ ಅವಿರೋಧ ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ತಾಲೂಕಿನ 3 ಸಾಮಾನ್ಯ ಸ್ಥಾನಕ್ಕೆ ಕರ್ನಂಡ ಎಂ. ಸೋಮಯ್ಯ, ಬೊಪ್ಪಂಡ ಎಂ. ಉತ್ತಪ್ಪ, ಬೊಮ್ಮಂಡ ಯು. ಗಣಪತಿ, ಆಲೇಮಾಡ ಕೆ. ಕಾರ್ಯಪ್ಪ ಹಾಗೂ ಪರಿಶಿಷ್ಟ ಜಾತಿಯಿಂದ ಹೆಚ್.ಎಲ್. ವಿಠಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಸಾಮಾನ್ಯ 3 ಸ್ಥಾನಕ್ಕೆ ಬಿ.ಕೆ. ಚಿಣ್ಣಪ್ಪ, ಜಿ.ಎಸ್. ಉದಯಕುಮಾರ್, ಎಂ.ಆರ್. ಗೋವಿಂದರಾಜು ಚುನಾಯಿತರಾಗಿದ್ದಾರೆ. ಮಹಿಳಾ ಸ್ಥಾನಕ್ಕೆ ಪುಷ್ಪ ನಾಗರಾಜು ಹಾಗೂ ಹಿಂದುಳಿದ ವರ್ಗಕ್ಕೆ ಕಮರುನ್ನೀಸ ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಸಂಘದ ಕಾರ್ಯದರ್ಶಿ ಬಿ.ಕೆ. ಗಣಪತಿ ತಿಳಿಸಿದ್ದಾರೆ.