ಮಡಿಕೇರಿ, ಫೆ. 12: ಮಡಿಕೇರಿ ಅಂಚೆ ಕಚೇರಿಯಲ್ಲಿ ತಾ. 14 ರಂದು ವಿಶೇಷ ಆಧಾರ್ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಹೊಸ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯ ನಡೆಯಲಿದ್ದು, ಬೆಳಿಗ್ಗೆ 9.30 ರಿಂದ ಸಂಜೆ 5ರ ತನಕ ಸೇವೆ ಒದಗಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆಯನ್ನು ಪಡೆದುಕೊಳ್ಳುವಂತೆ ಅಂಚೆ ಕಚೇರಿ ಪ್ರಕಟಣೆ ಕೋರಿದೆ.