ಮಡಿಕೇರಿ, ಫೆ. 12: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮಡಿಕೇರಿ ಇದರ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಪದಾಧಿಕಾರಿಗಳ ನೇಮಕವಾಗಿದ್ದು, ತಾ. 16 ರಂದು ನಡೆಯಬೇಕಿದ್ದ ಚುನಾವಣೆಯು ರದ್ದುಗೊಂಡಿರುವುದಾಗಿ ಚುನಾವಣಾಧಿಕಾರಿ ಸಿ.ಕೆ. ಸುರೇಶ್ ತಿಳಿಸಿದ್ದಾರೆ.
ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳಾಗಿ ಮಂಡುವಂಡ. ಪಿ. ಮುತ್ತಪ್ಪ, ಚೋವಂಡ. ಡಿ. ಕಾಳಪ್ಪ, ಆಲೆಮಾಡ. ಕೆ. ಕಾರ್ಯಪ್ಪ, ನಾಟೋಳಂಡ. ಡಿ. ಚರ್ಮಣ, ಪಟ್ಟಡ. ಎ. ಕರುಂಬಯ್ಯ, ಕೊಂಗಾಂಡ. ಎ. ತಿಮ್ಮಯ್ಯ, ಮಣವಟ್ಟೀರ. ಬಿ. ಮಾಚಯ್ಯ, ನಂದೇಟಿರ. ಪಿ. ರಾಜ ಮಾದಪ್ಪ, ಕುಡುವಂಡ. ಬಿ. ಉತ್ತಪ್ಪ, ಕೇಕಡ. ಎಂ. ಸುಗುಣ, ಶಾಂತೆಯಂಡ. ಟಿ. ದೇವರಾಜ್, ಯಂ. ಜಿ. ಉಷಾ, ಸಿ. ಬೇಬಿ ಪೂವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.