ಗೋಣಿಕೊಪ್ಪ ವರದಿ, ಫೆ. 10: ಮುಳಿಯ ಜ್ಯುವೆಲ್ಸ್‍ಗೆ 75 ವರ್ಷ ತುಂಬಿದ ನೆನಪಿನಲ್ಲಿ ಗೋಣಿಕೊಪ್ಪ ಜ್ಯುವೆಲ್ಸ್ ಶೋರೂಂನಲ್ಲಿ 75 ದಿನಗಳ ಕಾಲ ಆಚರಿಸಲಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೀಪ ಬೆಳಗಿಸಿ, ಬಂಪರ್ ಬಹುಮಾನದ ಬ್ಯಾನರ್ ಬಿಡುಗಡೆ ಮಾಡುವ ಮೂಲಕ ಅತಿಥಿಗಳು ಚಾಲನೆ ನೀಡಿದರು.

ಆಚರಣೆಯ ಪ್ರಯುಕ್ತ ಗ್ರಾಹಕರಿಗೆ ಬಂಪರ್ ಬಹುಮಾನ ಕೂಪನ್ ಮೂಲಕ ದಿನಕ್ಕೊಂದು ಬಹುಮಾನ ನೀಡಲಾಗುವುದು. ಗುಣಮಟ್ಟ ಮೂಲಕ ಗ್ರಾಹಕರಿಗೆ ಮತ್ತಷ್ಟು ಕೊಡುಗೆ ನೀಡಲಾಗುವುದು ಎಂದು ಮುಳಿಯ ಮಾರುಕಟ್ಟೆ ಮುಖ್ಯಸ್ಥ ವೇಣು ಶರ್ಮ ತಿಳಿಸಿದರು.

ಡಾ. ರೇಖಾ ವಸಂತ್ ಅವರು ಕೊಡಗಿನ ಪತ್ತಾಕ್ ಆಭರಣದ ಹಿನ್ನೆಲೆ ತಿಳಿಸಿಕೊಟ್ಟರು. ಆಭರಣದ ಮೂಲ ಕೂಡ ಬುಡಕಟ್ಟು ಸಮುದಾಯ ಸಂಸ್ಕøತಿಯನ್ನು ತೋರಿಸುತ್ತದೆ ಎಂದರು.

ಶಿಕ್ಷಣ ತಜ್ಞ ಪ್ರೊ. ನಂಜುಂಡ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕೃಷಿಕ ಪೆಮ್ಮಣಮಾಡ ರಮೇಶ್, ಪ್ರಮುಖರಾದ ಕಬ್ಬಚ್ಚೀರ ಚಿದಂಬರಮ್, ರೂಪಾ ಕುಮಾರ್, ರತಿ ಉತ್ತಪ್ಪ, ಕಾಂತಿ ಸತೀಶ್, ಮೇರಿಯಂಡ ಬೋಪಣ್ಣ, ಮುಳಿಯ ವ್ಯವಸ್ಥಾಪಕ ಅಶೋಕ್ ಬಂಗೇರಾ, ಇತರರು ಪಾಲ್ಗೊಂಡಿದ್ದರು.