ಮಡಿಕೇರಿ, ಜ. 25: ದೇವಾಟ್‍ಪರಂಬ್ ಕೊಡವ ನರಮೇಧ ದುರಂತ ಘಟನೆಯನ್ನು ಖಂಡಿಸಿ, ವಿಶ್ವ ರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ‘‘ಹೋಲೊಕಾಸ್ಟ್ ರಿಮೆಂಬರೆನ್ಸ್’’ ದಿನದ ಅಂಗವಾಗಿ ತಾ. 27ರಂದು ಪೂರ್ವಾಹ್ನ 10.30 ಗಂಟೆಗೆ ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸಿ.ಎನ್.ಸಿ. ಆಶ್ರಯದಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಯಲಿದೆ.