ಮಡಿಕೇರಿ, ಜ. 25: ರೋಟರಿ ಮಿಸ್ಟಿ ಹಿಲ್ಸ್, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಫ್ರೀಡಂ ಟ್ರಸ್ಟ್ ಚೆನ್ನೈ, ಬೆಂಗಳೂರಿನ ಡಿಲ್ಲಿ ಪಬ್ಲಿಕ್ ಶಾಲೆಯ ಜಂಟಿ ಆಶ್ರಯದಲ್ಲಿ; ಇಲ್ಲಿನ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂದು 48 ಮಂದಿಗೆ ಕೃತಕ ಕಾಲುಗಳನ್ನು ಜೋಡಿಸಲಾಯಿತು.
ಕೊಡಗು ರೆಡ್ ಕ್ರಾಸ್ ಘಟಕದ ಸಭಾಪತಿ ಬಿ.ಕೆ. ರವೀಂದ್ರ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕೃತಕ ಕಾಲು ಜೋಡಣೆಯಲ್ಲಿ ಪಾಲ್ಗೊಂಡಿರುವ 48 ಮಂದಿಯ ಪೈಕಿ; 18 ಮಂದಿ ಅಪಘಾ ದಿಂದ ಊನಗೊಂಡಿದ್ದು, ಸುಮಾರು 30 ಮಂದಿ ಸಕ್ಕರೆ ಕಾಯಿಲೆಯ ದುಷ್ಪರಿಣಾಮ ಕಾಲು ಕಳೆದು ಕೊಂಡಿದ್ದಾಗಿ ಕಳವಳ ವ್ಯಕ್ತಪಡಿಸಿದರು. ಈ ದಿಸೆಯಲ್ಲಿ ಪ್ರತಿಯೊಬ್ಬರು ಆರೋಗ್ಯಕ್ಕೆ ಒತ್ತು ನೀಡುವಂತೆ ತಿಳಿ ಹೇಳಿದರು. ಈ ಸಂದರ್ಭ ವಿಶೇಷ ಚೇತನ ಅಧಿಕಾರಿ ಸಂಪತ್ಕುಮಾರ್, ಎಸ್.ವಿ.ವೈ.ಎಂ. ಸಂಘಟನೆಯ ಬೋರಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್, ಎಸ್.ವಿ. ವೈ.ಎಂ.ನ ಮಂಜುನಾಥ್, ಸುನಿತಾ, ಫ್ರೀಡಂ ಸಂಸ್ಥೆಯ ಉಷಾ ಭಾರದ್ವಾಜ್ ಮೊದಲಾದವರು ಪಾಲ್ಗೊಂಡಿದ್ದರು.