ನಾಪೆÇೀಕ್ಲು, ಜ. 27: ನಾಪೆÇೀಕ್ಲು ಗ್ರಾಮದ ಚೆರಿಯಪರಂಬು ಬಳಿಯ ವಾಸವಾಗಿದ್ದ ಅಸ್ಸಾಂ ಮೂಲದ ಕೂಲಿ ಕಾರ್ಮಿಕನೋರ್ವ ತನ್ನ ಪತ್ನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ ಪೊಲೀಸÀರ ಅತಿಥಿಯಾಗಿದ್ದಾನೆ. ಅಸ್ಸಾಂ ಮೂಲಕ ದಿಲ್‍ಮುಲ್ಲ ಎಂಬ ಕಾರ್ಮಿಕ ತನ್ನ ಹೆಂಡತಿ ಫರೀಧ ಬೇಗಂ ಹಾಗೂ ಮಗುವಿನೊಂದಿಗೆ ವಾಸವಾಗಿದ್ದ. ಈತನ ಸಂಬಂಧಿಕರೂ ಕೂಡ ಪಕ್ಕದಲ್ಲಿಯೇ ವಾಸವಾಗಿದ್ದು, ಈ ಕುಟುಂಬದ ನಡುವೆ ವಿನಾ ಕಾರಣ ಕಲಹ ಏರ್ಪಟ್ಟಿದ್ದು, ಪತ್ನಿ ಫರೀಧ ತನ್ನ ತಾಯಿ ವಾಸವಾಗಿದ್ದ ಸಮೀಪದ ಮನೆಗೆ ತೆರಳಿದ್ದಳು. ಮರು ದಿನ ದಿಲ್‍ಮುಲ್ಲ ತನ್ನ ಅತ್ತೆ ಮನೆಗೆ ಬಂದು ತನ್ನ ಪತ್ನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದು ಗಾಯಾಳುವಿಗೆ ನಾಪೆÇೀಕ್ಲು ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲಾಸ್ಪತ್ರೆಗೆ ಸಾಗಿಸಲಾಗಿದ್ದು, ನಾಪೆÇೀಕ್ಲು ಎ.ಎಸ್.ಐ. ಕುಶಾಲಪ್ಪ ಮತ್ತು ಸಿಬ್ಬಂದಿ ಆರೋಪಿ ದಿಲ್‍ಮುಲ್ಲನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.