ಕುಶಾಲನಗರ, ಜ. 24 : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಗುರುವಾರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ನಾಲ್ಕನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
2020-2024ನೆ ಇಸವಿ ವರಗೆ 5 ವರ್ಷಗಳ ಅವಧಿಗೆ ಸಹಕಾರ ಸಂಘದ ನಿರ್ದೇಶಕರಾಗಿ ಸಾಲಗಾರರ ಸಾಮಾನ್ಯ ವರ್ಗ (ಪ.ಪಂ.ವ್ಯಾಪ್ತಿ) ದಿಂದ ಹಾಲಿ ಅಧ್ಯಕ್ಷ ಟಿ.ಆರ್. ಶರವಣಕುಮಾರ್ (1041),ಮಾಜಿ ಉಪಾಧ್ಯಕ್ಷ ಪಿ.ಕಾರ್ತೀಶನ್ (810), ಎಚ್.ಎಂ.ಮಧುಸೂದನ್ (832), ಸಾಲಗಾರರ ಸಾಮಾನ್ಯ ವರ್ಗ (ಮುಳ್ಳುಸೋಗೆ ವ್ಯಾಪ್ತಿ)ದಿಂದ ಎಂ.ಕೆ.ಗಣೇಶ್ (582), ಸಾಲಗಾರರ ಸಾಮಾನ್ಯ ವರ್ಗ (ಗೊಂದಿಬಸವಹಳ್ಳಿ ವ್ಯಾಪ್ತಿ)ದಿಂದ ಜಿ.ಪಿ ಮಧು ಕುಮಾರ್ (968), ಸಾಲಗಾರರ ಸಾಮಾನ್ಯ ವರ್ಗ (ಗುಡ್ಡೆಹೊಸೂರು ವ್ಯಾಪ್ತಿ)ದಿಂದ ಪಿ.ಬಿ.ಯತೀಶ್ (859), ಸಾಲಗಾರರ ಹಿಂದುಳಿದ ಎ ಪ್ರವರ್ಗ ಕ್ಷೇತ್ರದಿಂದ ಬಿ.ಎ ಅಬ್ದುಲ್ ಖಾದರ್ (846), ಡಿ.ವಿ.ರಾಜೇಶ್ (844), ಸಾಲಗಾರರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜಗದೀಶ್ (810), ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ ರಾಮಕೃಷ್ಣಯ್ಯ (765), ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ವಿ ನೇತ್ರಾವತಿ (800), ಸಾಲಗಾರರ ಮಹಿಳಾ ಮೀಸಲು ಮುಳುಸೋಗೆ, ಗೊಂದಿಬಸವಹಳ್ಳಿ, ಗುಡ್ಡೆಹೊಸೂರು ಕ್ಷೇತ್ರದಿಂದ ಪಿ.ಎಂ ಕವಿತಾ (865), ಸಾಲಗಾರರಲ್ಲದ ಕ್ಷೇತ್ರದಿಂದ ವಿ.ಎಸ್.ಆನಂದ್ ಕುಮಾರ್ (207) ಜಯಗಳಿಸಿದ್ದಾರೆ. 11 ಮಂದಿ ನಿರ್ದೇಶಕರ ಸ್ಥಾನಗಳಿಗೆ ಒಟ್ಟು 36 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ ಎಂ.ಇ.ಮೋಹನ್ ಹಾಗೂ ಸಹಾಯಕರಾಗಿ ಸಂಘದ ಕಾರ್ಯದರ್ಶಿ ಲೋಕೇಶ್ ಕಾರ್ಯನಿರ್ವಹಿಸಿದರು.